ವಿದ್ಯುತ್ ಕದ್ದ ಆರೋಪ ಹೊರಿಸಿ 6 ವರ್ಷದವನನ್ನು ಕೋರ್ಟ್‌ಗೆಳೆದ ವಿದ್ಯುತ್ ಇಲಾಖೆ

ಗುರುವಾರ, 5 ಫೆಬ್ರವರಿ 2015 (16:28 IST)
6 ವರ್ಷದ ಪುಟ್ಟ ಮಗು ತನ್ನ ತಾತನ ಜತೆ ಜಿಲ್ಲಾ ನ್ಯಾಯಾಲಯಕ್ಕೆ ಬಂದಾಗ ಗಲಬಿಲಿಗೊಂಡಿದ್ದ. ತಾತ ದಯಾ ರಾಮ್ ಮಿಶ್ರಾ ಮತ್ತು ಕುಟುಂಬದ ಇತರ ಸದಸ್ಯರು ತನ್ನನ್ನು ಯಾಕೆ  ಈ ಸ್ಥಳಕ್ಕೆ ಕರೆದುಕೊಂಡು ಬಂದಿದ್ದಾರೆ ಎಂದಾತನಿಗೆ ಅರ್ಥವಾಗಲೇ ಇಲ್ಲ.  ಆ ಸಮಯದಲ್ಲಿ ಆತ ಶಾಲೆಯಲ್ಲಿರಬೇಕಿತ್ತು. ಆದರೆ  ತನ್ನ ಮೇಲೆ ಕೇಸ್ ದಾಖಲಾಗಿದೆ. ಜಾಮೀನು ಪಡೆಯಲು ತಾನು ಅಲ್ಲಿರಲೇ ಬೇಕು ಎಂಬುದೆಲ್ಲ ಆ ಮಗುವಿಗೆ ಹೇಗೆ ಗೊತ್ತಾಗಬೇಕು. ಆತ ತನ್ನ ತಾತನ ಜತೆ ಕೋರ್ಟ್‌ಗೆ ಹಾಜರಾದ. ಆದರೆ ಅಂದು ವಿಚಾರಣೆ ನಡೆಯಲಿಲ್ಲ. 
ಯಶವಂತನ ಅಜ್ಜ  ಹೇಳುವ ಪ್ರಕಾರ, ವಿದ್ಯುತ್ ಸರಬರಾಜು ಕಂಪನಿ ಡಿಸೆಂಬರ್ 7, 2013ರಲ್ಲಿ ಬಾಲಕನ ವಿರುದ್ಧ ಪ್ರಕರಣವನ್ನು ದಾಖಲಿಸಿತ್ತು. ಅಂದು ತಪಾಸಣೆಗಾಗಿ ವಿಜಯಪುರ  ಗ್ರಾಮಕ್ಕೆ ಬಂದಿತ್ತು. ಬಾಲಕ ಯಶವಂತನ ಕುಟುಂಬಕ್ಕೆ ಸೇರಿದ ಹೊಲದಲ್ಲಿ ನೀರಾವರಿಗಾಗಿ ವಿದ್ಯುತ್ ಮೋಟಾರ್ ಅಳವಡಿಸಿರುವುದನ್ನು ಕಂಡ ಅಧಿಕಾರಿಗಳು ಮಗುವಿನ ಮೇಲೆ ವಿದ್ಯುತ್ ಕದ್ದ ಆರೋಪವನ್ನು ಹೊರಿಸಿದ್ದಾರೆ. 
 
ತಮ್ಮ ಹೆಸರಿನ ಬದಲು ಮಗುವಿನ ಮೇಲೆ ಪ್ರಕರಣ ದಾಖಲಾದ ನೋಟಿಸ್ ನೋಡಿ ದಂಗಾದ ಕುಟುಂಬಸ್ಥರು ಆತನೊಂದಿಗೆ ಲೋಕ ಅದಾಲತ್‌ಗೆ ಹಾಜರಾದರು. ಆದರೆ ಅಂದು ವಿಚಾರಣೆ ನಡೆಯಲಿಲ್ಲ. 
 
ಇತ್ತೀಚಿಗೆ ಜನವರಿ 2 ರಂದು ಮತ್ತೆ ಹಾಜರಾಗುವಂತೆ ಬಾಲಕನಿಗೆ ನೋಟಿಸ್ ಜಾರಿಯಾಗಿತ್ತು. ಆದರೆ ಈ ಬಾರಿ ಸಹ ವಿಚಾರಣೆಯನ್ನು ಮುಂದಕ್ಕೆ ಹಾಕಲಾಗಿದೆ ಎಂದು ಮಗುವಿನ ತಾತ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ