ಶ್ರಾವಣ ಸೋಮವಾರದ ಪೌರಾಣಿಕ ಕಥೆ

ಸೋಮವಾರ, 14 ಜುಲೈ 2014 (16:51 IST)
ಶ್ರಾವಣ ಸೋಮವಾರ ಕಥೆಯ ಅನುಸಾರ , ಅಮರ್‌‌‌ಪುರ ನಗರದದಲ್ಲಿ ಒಬ್ಬ ಧನಿಕ ವ್ಯಾಪಾರಿ ಇರುತ್ತಿದ್ದನು. ದೂರ ದೂರದರೆಗೆ ಇವನು ವ್ಯಾಪಾರ ಮಾಡುತ್ತಿದ್ದನು. ನಗರದಲ್ಲಿ ಇವನಿಗೆ ಮರ್ಯಾದೆ ನೀಡಲಾಗುತ್ತಿತ್ತು. ಎಲ್ಲವೂ ಇದ್ದರೂ ಕೂಡ ಇತ ತನಗೆ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ದುಖಃದಲ್ಲಿ ಇರುತ್ತಿದ್ದನು. 
 
ದಿನ ರಾತ್ರಿ ಇವನಿಗೆ ಮಕ್ಕಳಾಗಿಲ್ಲವೆಂಬ  ಚಿಂತೆ . ಇವನ ಸಾವಿನ ನಂತರ ಇವನ ವ್ಯಾಪಾರ ಯಾರು ನೋಡಿಕೊಳ್ಳುವವರು ಎಂಬುದು ಇವನಿಗೆ ಚಿಂತೆ. 
 
ಪುತ್ರ ಪ್ರಾಪ್ತಿಗಾಗಿ ವ್ಯಾಪಾರಿ ಪ್ರತಿ ಸೋಮವಾರ ಶಿವನ ವೃತ ಮತ್ತು ಫೂಜೆ ಮಾಡುತ್ತಿದ್ದನು . ಸಾಯಂಕಾಲ ಶಿವ ಮಂದಿರಕ್ಕೆ ಹೋಗಿ ತುಪ್ಪದ ದೀಪ ಹಚ್ಚುತ್ತಿದ್ದನು. 
 
ಈ ವ್ಯಾಪಾರಿಯ ಭಕ್ತಿ ನೋಡಿ ಒಂದು ದಿನ ಪಾರ್ವತಿ ಭಗವಾನ ಶಿವನಿಗೆ " ಹೇ ಪ್ರಭು ಈ ವ್ಯಾಪಾರಿ ನಿಮ್ಮ ಭಕ್ತನಾಗಿದ್ದಾನೆ. ಎಷ್ಟು ದಿನಗಳಿಂದ ಸೋಮವಾರ ವೃತ ಮತ್ತು ಪೂಜೆ ಮಾಡುತ್ತಿದ್ದಾನೆ. ಈ ವ್ಯಾಪಾರಿಯ ಮನೋಕಾಮನೆ ಪೂರ್ತಿ ಮಾಡಿ" ಎಂದಳು 
 
ಶಿವ ನಕ್ಕು , ಹೇ ಪಾರ್ವತಿ ಈ ಜಗತ್ತಿನಲ್ಲಿ ಅವರವರ ಕರ್ಮದನುಸಾರ ಅವರಿಗೆ ಫಲ ಪ್ರಾಪ್ತಿಯಾಗುತ್ತವೆ. ಯಾವ ರೀತಿ ಕರ್ಮ ಮಾಡುತ್ತಾರೆ ಆ ತರಹ ಫಲ ಸಿಗುತ್ತದೆ ಎಂದು ಹೇಳಿದನು. 
 
ಆದರೂ ಕೂಡ ಪಾರ್ವತಿ ಶಿವನ ಮಾತನ್ನು ಕೇಳದೆ , ಇಲ್ಲ ಪ್ರಾಣನಾಥ ಈ  ವ್ಯಾಪಾರಿಗೆ ಪುತ್ರ ಸಂತಾನ ನೀಡಬೇಕು ಆತ ನಿಮ್ಮ ಅನನ್ಯ ಭಕ್ತ ನಾಗಿದ್ದಾನೆ ಎಂದಳು. 
  
ಪಾರ್ವತಿಯ ಆಗ್ರಹದಿಂದ ಭಗವಾನ ಶಿವ ಹೇಳಿದ , ನಿನ್ನ ಆಗ್ರದ ಮೇರೆಗೆ ವ್ಯಾಪಾರಿಗೆ ಪುತ್ರ ಪ್ರಾಪ್ತಿ ಮಾಡುತ್ತೆನೆ ಆದರೆ ಅವನ ಪುತ್ರ 16 ವರ್ಷದ ನಂತರ ಸಾಯುತ್ತಾನೆ ಎಂದು ತಿಳಿಸಿದಳು . 
 
ಆ ದಿನ ರಾತ್ರಿ ಶಿವ ವ್ಯಾಪಾರಿಯ ಕನಸಿನಲ್ಲಿ ಬಂದು ಪುತ್ರ ಪ್ರಾಪ್ತಿಯ ವರದಾನ ನೀಡಿ ನಿನ್ನ ಪುತ್ರ 16 ವರ್ಷದಲ್ಲಿ ಸಾಯುತ್ತಾನೆ ಎಂದನು. 
 
ವ್ಯಾಪಾರಿ ಶಿವನ ಅನುಗ್ರಹದಿಂದ ಖುಷಿಯಿದ್ದನು ಆದರೆ ಪುತ್ರನ ಸಾವಿನ ಬಗ್ಗೆ ಚಿಂತಿತನಾದನು. ವ್ಯಾಪಾರಿ ಮೊದಲಿನ ತರಹ ವಿಧಿವತ್ತಾಗಿ ಪೂಜೆ ಮುಂದುವರೆಸಿದನು,. ಕೆಲ ತಿಂಗಳಿನ ನಂತರ ಮನೆಯಲ್ಲಿ ಸುಂದರ ಪುತ್ರ ಜನಿಸಿದ . ಆಗ ವ್ಯಾಪಾರಿ ಮನೆಯಲ್ಲಿ ಸಂಭ್ರಮ ಏರ್ಪಟ್ಟಿತು. ಬಹಳಷ್ಟು ವಿಜ್ರಂಭಣೆಯಿಂದ ಪುತ್ರನ ಜನನದ ಸಮಾರಂಭ ಮಾಡಿದ. 
 
ವ್ಯಾಪಾರಿಯ ಪುತ್ರ ಜನ್ಮ ವೇನೋ ಆಯಿತು ಆದರೆ ಪುತ್ರನ ಸಾವಿನ ಬಗ್ಗೆ ವ್ಯಾಪಾರಿ ಚಿಂತೆಯಲ್ಲಿದ್ದನು. ಈ ವಿಷಯ ಆತ ಯಾರಿಗೂ ಹೇಳಿರಲಿಲ್ಲ. ವಿದ್ವಾನ ಭ್ರಾಹ್ಮಣ ಪುತ್ರನಿಗೆ ಅಮರ್ ಎಂದು ಹೆಸರನ್ನಿಟ್ಟ. 
 

ವೆಬ್ದುನಿಯಾವನ್ನು ಓದಿ