ಎಮ್ಮೆ ದಾಳಿಗೆ ಹೆದರಿ ದಿಕ್ಕಾಪಾಲಾಗಿ ಓಡಿದ ಜೋಡಿಸಿಂಹಗಳು

ಗುರುವಾರ, 5 ಫೆಬ್ರವರಿ 2015 (13:03 IST)
ಕಾಡಿನ ರಾಜ ಎಂದು ಕರೆಸಿಕೊಳ್ಳುವ ಸಿಂಹ  ದೊಡ್ಡ ದೊಡ್ಡ ಪ್ರಾಣಿಗಳನ್ನು ಸಹ ನಿರಾಯಾಸವಾಗಿ ಕೊಂದು ತಿನ್ನುತ್ತದೆ. ಆದರೆ ಪ್ರತಿ ಬಾರಿ ಈ ಬಲಾಢ್ಯ ಪ್ರಾಣಿಗೆ ಸಫಲತೆ ಸಿಗುತ್ತದೆ ಎಂದುಕೊಂಡರೆ ಅದು ತಪ್ಪೆಂದು ವಿವರಿಸಲು ಈ ಚಿತ್ರ ಸಾಕು. ಈ ಘಟನೆ ಕೀನ್ಯಾದ ಅರಣ್ಯವೊಂದರಲ್ಲಿ ಕಂಡುಬಂದಿದೆ.
                         
 
ಪ್ರತ್ಯಕ್ಷದರ್ಶಿ ಫೋಟೋಗ್ರಾಪರ್ ಪ್ರಕಾರ ಪ್ರಕಾರ ಸಿಂಹ ಮತ್ತು ಸಿಂಹಿಣಿ ಸೇರಿ ಹುಲ್ಲು ಮೇಯುತ್ತಿದ್ದ ಕಾಡೆಮ್ಮೆ ಮತ್ತು ಕಾಡುಕೋಣಗಳಲ್ಲಿ ಒಂದನ್ನು ಬಲಿ ಪಡೆದುಕೊಳ್ಳಲು ಹೊಂಚು ಹಾಕಿ ಅವುಗಳ ಹತ್ತಿರ ಹೋಗಿವೆ. ಸಿಂಹ, ಸಿಂಹಿಣಿ ದಾಳಿ ನಡೆಸುವ ಮೊದಲೇ ಎಮ್ಮೆಗಳ ದೃಷ್ಟಿ ಈ ಕ್ರೂರ ಜೋಡಿಗಳ ಮೇಲೆ ಹೋಗಿದೆ. ತಕ್ಷಣ ಅವೆಲ್ಲವೂ ಸಿಂಹಗಳ ಮೇಲೆ ಪ್ರತಿದಾಳಿ ನಡೆಸಲು ಮುನ್ನುಗ್ಗ ತೊಡಗಿವೆ. 

ಜೋಡಿ ಸಿಂಹಗಳ ಪಲಾಯನದ ಫೋಟೋ ಮುಂದಿನ ಪುಟದಲ್ಲಿ....

ಎಮ್ಮೆಗಳು ಧಾವಿಸಿ ಬರುತ್ತಿರುವುದನ್ನು ಕಂಡು ಬೆದರಿದ ಹೆಣ್ಣು ಸಿಂಹ ಮೊದಲೇ ಓಡಿ ಪರಾರಿಯಾಗಿದೆ. ಆದರೆ ಗಂಡು ಸಿಂಹ ಸ್ವಲ್ಪ ಹೊತ್ತು ಬಲಿ ಪಡೆದೇ ತಿರುತ್ತೇನೆ ಎಂಬ ಹಠ ಹೊತ್ತು ಅಲ್ಲೇ ನಿಂತು ಅವಕಾಶಕ್ಕಾಗಿ ಕಾದಿದೆ. ಆದರೆ ಎಮ್ಮೆಗಳ ಗುಂಪು ಅತಿ  ಹತ್ತಿರ ಬರುತ್ತಿದ್ದಂತೆ ಸಿಂಹದ ಕಣ್ಣಲ್ಲಿ ಸಾವಿನ ಭಯ ಹುಟ್ಟತೊಡಗಿದೆ. ಇನ್ನೆನು ತಾನು ಸತ್ತು ಹೋಗುತ್ತೇನೆ ಎಂಬ ಭೀತಿಗೆ ಸಿಲುಕಿದ ಸಿಂಹ ತನ್ನ ಸಂಗಾತಿ ಓಡಿದ ಕಡೆ ದಿಕ್ಕಾಪಾಲಾಗಿ ಓಡತೊಡಗಿದೆ.ಸಿಂಹವನ್ನು ತುಂಬಾ ದೂರದವರೆಗೆ ಓಡಿಸಿಕೊಂಡು ಹೋದ ಎಮ್ಮೆಗಳು ನಂತರ ತಮ್ಮ  ಹಿಂತಿರುಗಿವೆ. 
ಈ ಪೂರ್ತಿ ಘಟನೆ ಕಾಡು ಸುತ್ತಲು ಹೋಗಿದ್ದ ಫೋಟೋಗ್ರಾಫರ್‌ಗಳಿಬ್ಬರ ಕ್ಯಾಮರಾದಲ್ಲಿ ಸೆರೆಯಾಗಿದೆ.55 ವರ್ಷದ ಫೋಟೋಗ್ರಾಫರ್ ರೆನಾಡ್ ಹೇಳುತ್ತಾರೆ, "ಎಮ್ಮೆಗಳ ಗುಂಪು ಸಿಂಹವನ್ನು ಅಟ್ಟಿಸಿಕೊಂಡು ಬರುತ್ತಿರುವಾಗ  ಸಿಂಹದ ಕಣ್ಣಲ್ಲಿ ಭೀತಿ ಸ್ಪಷ್ಟವಾಗಿ ಕಾಣುತ್ತಿತ್ತು. ಕಂಗಾಲಾಗಿ ಓಡುತ್ತಿದ್ದ ಸಿಂಹ ಪೊದೆಯೊಂದರಲ್ಲಿ ನುಗ್ಗಿದಾಗ ಎಮ್ಮೆಗಳು ವಾಪಸ್ಸಾದವು". 
 
ಏನೇ ಆಗಲಿ ಒಗ್ಗಟ್ಟಿದ್ದಲ್ಲಿ ಗೆಲುವಿದೆ ಎನ್ನಲು ಈ ಪ್ರಕರಣವೇ ಸಾಕ್ಷಿ....

ವೆಬ್ದುನಿಯಾವನ್ನು ಓದಿ