ನಿಮ್ಮ ಮನೆಯ ವಾಸ್ತು ಹೀಗಿರಲಿ...

ಬುಧವಾರ, 19 ನವೆಂಬರ್ 2014 (17:34 IST)
1. ಮನೆಯ ಮುಂಬಾಗಿಲು ಪೂರ್ವ ಅಧವಾ ಉತ್ತರ ದಿಕ್ಕಿನೆಡೆಗಿರಲಿ. 
2. ದಕ್ಷಿಣ ಮತ್ತು ಪೂರ್ವ ದಿಕ್ಕಿನ ಗೋಡೆಗಿಂತ ಉತ್ತರ ಮತ್ತು ಪಶ್ಚಿಮ ದಿಕ್ಕಿನ ಗೋಡೆ ಗಟ್ಚಿಮುಟ್ಟಾಗಿರಲಿ. 
3. ದಕ್ಷಿಣ ಅಧವಾ ಪೂರ್ವ ಭಾಗದಲ್ಲಿ ಅಡುಗೆ ಕೋಣೆ ಇರಲಿ
4. ಪಶ್ಚಿಮ ದಿಕ್ಕಿನಲ್ಲಿ ಊಟದ ಕೋಣೆ ಇದ್ದರೆ ಆರೋಗ್ಯ ವರ್ಧಿಸುತ್ತದೆ. 
5. ಮನೆಯ ಒಳಗಿನ ಕೊಠಡಿಯ ಬಾಗಿಲುಗಳು ಪೂರ್ವ ದಿಕ್ಕಿನೆಡೆಗೆ ಮುಖಮಾಡಿರಬೇಕು. 
6. ಪಶ್ಚಿಮ ಮತ್ತು ದಕ್ಷಿಣ ಗೋಡೆಯ ಮೇಲೆ ಕನ್ನಡಿ ತೂಗು ಹಾಕುವುದು ಅಶುಭ.
7. ಸ್ನಾನ ಮತ್ತು ಶೌಚ ಗೃಹಗಳು ದಕ್ಷಿಣ ಅಧವಾ ಪೂರ್ವ ದಿಕ್ಕಿನಲ್ಲಿದ್ದರೆ ಉತ್ತಮ.
8. ಮಲಗುವಾಗ ತಲೆಯನ್ನು ಪಶ್ಚಿಮ ಅಧವಾ ದಕ್ಷಿಣದ ಕಡೆಗೆ ಇರಿಸಿ ಮಲಗಬೇಕು.
9. ಮೇಲ್ಚಾವಣಿಯಿಂದ ಹರಿದು ಬರುವ ನೀರು ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಿಂದ ಹರಿದುಹೋಗುವಂತೆ ನೋಡಿಕೊಳ್ಳಬೇಕು.
10. ಮನೆಯ ಪೂರ್ವ ಅಧವಾ ಉತ್ತರ ಭಾಗದಲ್ಲಿ ದೊಡ್ಡ ಮರಗಳನ್ನು ಬೆಳೆಸಬಾರದು.
11. ಓದುವಾಗ ನಿಮ್ಮ ಮುಖ ಪೂರ್ವದ ಕಡೆಗೆ ಮುಖಮಾಡಿರಲಿ
12. ಮಲಗಿಕೊಂಡಾಗ ಕಾಲ ಮೇಲೆ ಕಾಲು ಹಾಕಿಕೊಂಡು ಮಲಗಬೇಡಿ.
13. ಅಳುವ ಮಗುವಿನ ಚಿತ್ರ, ಕೋಪಗೊಂಡಿರುವ ವ್ಯಕ್ತಿ, ಕ್ರೂರ ಮುಖದ ಹದ್ದು, ಕಾಗೆ ಚಿತ್ರವನ್ನು ಮನೆಯ ಗೋಡೆಯ ಮೇಲೆ ತೂಗುಹಾಕಬೇಡಿ
14. ಕೊಠಡಿಯ ಸಂಖ್ಯೆಗಳು ಸೊನ್ನೆಯಿಂದ ಕೊನೆಗೊಳ್ಳಬಾರದು. 
15. ಮನೆಯಲ್ಲಿ ನಿಂತುಕೊಂಡು ತಿನ್ನುವುದನ್ನು, ಕುಡಿಯುವುದನ್ನು ಮಾಡಬಾರದು. 

ವೆಬ್ದುನಿಯಾವನ್ನು ಓದಿ