ಪತ್ನಿ ಸುಶಿಕ್ಷಿತಳಾದರೆ ವಿಚ್ಚೇಧನಗಳು ಕಡಿಮೆಯಂತೆ

ಶನಿವಾರ, 26 ಜುಲೈ 2014 (17:58 IST)
ಒಂದು ವೇಳೆ ನಿಮ್ಮ ಪತ್ನಿ ನಿಮಗಿಂತ ಹೆಚ್ಚು ಸುಶಿಕ್ಷಿತೆ ಮತ್ತು ಹೆಚ್ಚು ಸಂಪಾದಿಸುತ್ತಿದ್ದರೇ ನಿಮ್ಮ ವೈವಾಹಿಕ ಜೀವನ ಸುಂದರವಾಗಿರುತ್ತದೆ. ಒಂದು ಅಧ್ಯಯನದ ಪ್ರಕಾರ ಈ ತರಹದ ದಾಂಪತ್ಯದಲ್ಲಿ ನೆಮ್ಮದಿಯಿರುವುದರಿಂದ ವಿಚ್ಚೇದನದ ಪ್ರಕರಣಗಳು ಕಡಿಮೆ ಎನ್ನಲಾಗಿದೆ. 
 
ಅಮೆರಿಕಾದ ವಿಸ್ಕಾನ್ಸಿನ್‌ನ  ರಾಜ್ಯದ ಯೂನಿವರ್ಸಿಟಿ ಆಫ್‌ ವಿಸ್ಕಾನ್ಸಿನ್‌ನ-ಮೆಡಿಸಿನ್‌‌ನಲ್ಲಿ ಮನೋವಿಜ್ಞಾನದ .  ಅಸೋಸಿಯೆಟ್‌ ಪ್ರೊಫೆಸರ್‌ ಕ್ರಿಸ್ಟಿನ್‌ ಆರ್‌ ಶ್ವಟ್ರಜ್‌‌ ಪ್ರಕಾರ " ಅಧ್ಯಯನದಿಂದ ದಾಂಪತ್ಯ ಜೀವನ ಹೊಸ ಟ್ರೆಂಡ್‌‌ ಗೊತ್ತಾಗುತ್ತದೆ. ಈಗ ಹಣ ಗಳಿಸುವ ಪತಿ ಮತ್ತು ಗೃಹಿಣಿ ಪತ್ನಿ ರೀತಿಯ ವಿಚಾರ ಧಾರೆಗಳಲ್ಲಿ ಬದಲಾವಣೆಗಳು ಕಂಡುಬರುತ್ತಿವೆ. ಈಗಿನ ವೈವಾಹಿಕ ಜೀವನದಲ್ಲಿ ಸಮಾನತಾವಾದವಿದೆ ಇದರಿಂದಾಗಿ ಮಹಿಳೆಯರ ಘನತೆಗೆ ಪುರುಷರಿಂದ ಕುಂದುಬರುವ ಸಾಧ್ಯತೆಗಳು ಕಡಿಮೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
 
ಅಧ್ಯಯನದ ಪ್ರಕಾರ, ಅಮೆರಿಕಾದಲ್ಲಿ 2005 ರಿಂದ 2009ರವರೆಗೆ ವಿವಾಹವಾದ ದಂಪತಿಗಳಲ್ಲಿ ಪತ್ನಿ, ಪತಿಗಿಂತ ಹೆಚ್ಚು ಸುಶಿಕ್ಷಿತಳಾಗಿರುವ ಸಂಖ್ಯೆ ಶೇ.60 ರಷ್ಟಾಗಿತ್ತು. ಆದರೆ, 1950 ರ ದಶಕದಲ್ಲಿ ಪತ್ನಿ ತನ್ನ ಪತಿಗಿಂತ ಹೆಚ್ಚು ಸುಶಿಕ್ಷಿತಳಾಗಿರುವ ಸಂಖ್ಯೆ ಕೇವಲ ಶೇ.35 ರಷ್ಟಾಗಿತ್ತು ಎನ್ನಲಾಗಿದೆ.
 
" ಪುರುಷ ಮತ್ತು ಸ್ತ್ರಿಯರ ನಡುವಿನ ಸಂಬಂಧದಲ್ಲಿ ಮಹಿಳೆಯರು ಹೆಚ್ಚು ಸುಶಿಕ್ಷಿತರಾಗಿರಲಿ ಎನ್ನುವುದಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಬದಲಾದ ಕಾಲಮಾನದಲ್ಲಿ ಪತ್ನಿ ಪತಿಗಿಂತ ಹೆಚ್ಚು ಸುಶಿಕ್ಷಿತಳಾಗುತ್ತಿರುವುದು ಕಂಡು ಬಂದಿದೆ ಎಂದು  ಅಸೋಸಿಯೇಟ್‌ ಪ್ರೊಫೆಸರ್‌ ಕ್ರಿಸ್ಟಿನ್‌ ಆರ್‌ ಶ್ವಟ್ರಜ್‌ ತಿಳಿಸಿದ್ದಾರೆ
 
: ಇತ್ತೀಚಿನ ದಿನಗಳಲ್ಲಿ ಯುವ ಜನತೆ ಸಮಾನತಾವಾದಿ ವಿವಾಹದಲ್ಲಿ ನಂಬಿಕೆ ಇಡುತ್ತಾರೆ.ಎಂದು ಶ್ವಟ್ರಜ್‌ ತಿಳಿಸಿದ್ದಾರೆ.  ಈ ಅಧ್ಯಯನ "ದಿ ರಿವರ್ಸಲ್ ಆಫ್‌ ದಿ ಜೆಂಡರ್ ಗ್ಯಾಪ್‌ ಇನ್ ಎಜುಕೇಶನ್‌ ಆಂಡ್‌ ಟ್ರೆಂಡ್ಸ್‌‌ ಇನ್ ಮೆರಿಟಲ್‌ ಡಿಜೆಲ್ಯೂಶನ್ ಅಧ್ಯಯನ ಸಂಸ್ಥೆಯೊಂದು ವರದಿ ಮಾಡಿದೆ.

ವೆಬ್ದುನಿಯಾವನ್ನು ಓದಿ