ಪುರುಷರಿಗಿಂತ ಮಹಿಳೆಯರಿಗೆ ಸೆಕ್ಸ್‌ ಹೆಚ್ಚಂತೆ !

ಶನಿವಾರ, 23 ಆಗಸ್ಟ್ 2014 (17:04 IST)
ನ್ಯೂಯಾರ್ಕ್‌: ಸೆಕ್ಸ್‌‌‌‌‌ನಲ್ಲಿ ಹೆಚ್ಚು ಸಂತೃಪ್ತಿ ಪಡೆಯುವಲ್ಲಿ, ಕೇವಲ ಪುರುಷರೊಂದಿಗೆ ಸೆಕ್ಸ್‌ ಮಾಡುವ ಮಹಿಳೆಯರಿಗಿಂತ ಸಲಿಂಗಕಾಮಿ ಮಹಿಳೆಯರು ಮುಂದೆ ಇದ್ದಾರೆ ಎಂದು ಅಧ್ಯಯನವೊಂದರಿಂದ ಬಹಿರಂಗವಾಗಿದೆ. ಅಧ್ಯಯನದ ಪ್ರಕಾರ, ಪುರುಷರು ತಮ್ಮ ಪರಿಚಿತ ಸಂಗಾತಿಯ ಜೊತೆಗೆ ಸೆಕ್ಸ್‌‌ ಮಾಡಿದಾಗ ಶೇ.85 ರಷ್ಟು ಲೈಂಗಿಕ ತೃಪ್ತಿ ಪಡೆದರೆ, ಮಹಿಳೆಯರು ಶೇ.63 ರಷ್ಟು ತೃಪ್ತಿ ಪಡೆಯುತ್ತಾರೆ ಎಂದು ಅಮೆರಿಕಾದ ಇಂಡಿಯಾನಾ ವಿಶ್ವವಿಧ್ಯಾಲಯದ ಸಂಶೋಧಕರು ತಿಳಿಸಿದ್ದಾರೆ. 
 
ಅಧ್ಯಯನದ ಪ್ರಕಾರ, ಸೆಕ್ಸ್‌‌‌‌‌ನಲ್ಲಿ ಲೆಸ್ಬಿಯನ್ ಮಹಿಳೆಯರು ಶೇ.75 ರಷ್ಟು, ಸ್ಟ್ರೆಟ್‌ ರಿಲೆಶನ್‌‌ಶಿಪ್‌‌ ಮಹಿಳೆಯರು ಶೇ.62 ರಷ್ಟು ಮತ್ತು ಪುರುಷ ಮತ್ತು ಮಹಿಳೆಯರ ಸಂಬಂಧ(ಬೈಸೆಕ್ಸಯವಲ್‌)ದಲ್ಲಿ ಮಹಿಳೆಯರು ಶೇ.58ರಷ್ಟು ಲೈಂಗಿಕ ಸಂತೃಪ್ತಿ ಪಡೆಯುತ್ತಾರೆ. 
 
ಅಧ್ಯಯನದಲ್ಲಿ, 21-65 ವಯೋಮಿತಿಯೊಳಗಿನ 6500 ಪುರುಷರು ಮತ್ತು ಮಹಿಳೆಯರನ್ನು ಬಳಸಿಕೊಳ್ಳಲಾಗಿತ್ತು. ಈ ಅಧ್ಯಯನದ ಅನುಸಾರ, " ಲೆಸ್ಬಿಯನ್ ಮಹಿಳೆಯರಿಗೆ ಮಹಿಳೆಯರ ಶರೀರದಲ್ಲಿ ಸೆಕ್ಸ್‌‌ಗೆ ಪ್ರೇರೇಪಿಸುವ ಎಲ್ಲಾ ಭಾಗದ ಪರಿಚಯವಿರುತ್ತದೆ, ಇದಕ್ಕಾಗಿ ತಮ್ಮ ಮಹಿಳಾ ಸಂಗಾತಿಗೆ ಲೈಂಗಿಕ ಸಂತೃಪ್ತಿಯವರೆಗೆ ತಲುಪಿಸುವಲ್ಲಿ ಯಶಸ್ವಿಯಾಗುತ್ತಾರೆ". 
 
ಈ ಅಧ್ಯಯನವನ್ನು ನೋಡಿದಾಗ, ಲೈಂಗಿಕ ಸಂತೃಪ್ತಿ ಹೊಂದುವಲ್ಲಿ ಪುರುಷರು ಮಹಿಳೆಯರಿಗಿಂತ ಮುಂದೆ ಇದ್ದಾರೆ. ಈ ಅಧ್ಯಯನ "ಸೆಕ್ಸುವಲ್‌ ಮೆಡಿಸಿನ್‌‌" ನಲ್ಲಿ ಪ್ರಕಟವಾಗಿದೆ.

ವೆಬ್ದುನಿಯಾವನ್ನು ಓದಿ