ಅರುಣ ಜೆಟ್ಲಿ ಆಗಲಿದ್ದಾರೆ ಉಪಪ್ರಧಾನಿ: ಭವಿಷ್ಯ ನುಡಿದ ಬಾದಲ್

ಶನಿವಾರ, 22 ಮಾರ್ಚ್ 2014 (12:49 IST)
PTI
ಶುಕ್ರವಾರ ನಡೆದ ಒಂದು ಪ್ರಚಾರ ಸಭೆಯಲ್ಲಿ ಮಾತನಾಡಿದ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ ಸಿಂಗ್ ಬಾದಲ್ ಭಾರತೀಯ ಜನತಾ ಪಕ್ಷದ ನಾಯಕ ಮುಂದಿನ ಉಪಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಜೆಟ್ಲಿ ಅಮೃತಸರದಿಂದ ಅಮರಸಿಂಗ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಪಂಜಾಬಿನ ಅಟಾರಿಯಲ್ಲಿ ಶುಕ್ರವಾರ ಅರುಣ ಜೆಟ್ಲಿ ತಮ್ಮ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು. ಆ ಸಮಯದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಂಜಾಬಿನ ಮುಖ್ಯಮಂತ್ರಿ ಪ್ರಕಾಶ ಸಿಂಗ್ ಬಾದಲ್, ಜೆಟ್ಲಿ ಭಾರತದ ಮುಂದಿನ ಉಪ ಪ್ರಧಾನಿ ಎಂದು ಹೇಳಿದರಲ್ಲದೇ "ನೀವು ಇವರನ್ನು ಗೆಲ್ಲಿಸಿದರೆ ಅವರು ಉಪ ಪ್ರಧಾನಿ ಅಥವಾ ವಿತ್ತಮಂತ್ರಿಯಾಗಲಿದ್ದಾರೆ" ಎಂದು ತಿಳಿಸಿದರು.

ಬಾದಲ್‌ರ ಈ ಹೇಳಿಕೆಯಿಂದ ಮತ್ತೊಮ್ಮೆ ಬಿಜೆಪಿಯಲ್ಲಿ ಆಕ್ರೋಶ ಆರಂಭವಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದರೆ ನಿಖರವಾಗಿ ಜೇಟ್ಲಿಗೆ ದೊಡ್ಡ ಜವಾಬ್ದಾರಿ ಸಿಗಬಹುದು.

ಬಾದಲ್ ಹೇಳಿಕೆಗೆ ಮೊದಲ ಪ್ರತಿಕ್ರಿಯೆ ಶಿವಸೇನೆಯಿಂದ ಬಂದಿದ್ದು ಅರುಣ್ ಜೇಟ್ಲಿ ಹೆಸರಲ್ಲಿ ನಮಗೆ ಆಕ್ಷೇಪಣೆ ಇಲ್ಲ. ಆದರೆ ಸುಷ್ಮಾ ಸ್ವರಾಜ್ ಹೆಸರನ್ನು ಯಾಕೆ ತೆಗಿದುಕೊಳ್ಳುತ್ತಿಲ್ಲ ಎಂದು ಅದು ಪ್ರಶ್ನಿಸಿದೆ. ಪ್ರಧಾನಿ ಅಭ್ಯರ್ಥಿ ವಿಷಯದಲ್ಲಿ ಮೊದಲಿನಿಂದಲೂ ಶಿವಸೇನೆ ಸುಷ್ಮಾ ಪರ ವಹಿಸುತ್ತ ಬಂದಿದೆ.

ವೆಬ್ದುನಿಯಾವನ್ನು ಓದಿ