ಆಪ್‌ ಪಕ್ಷವನ್ನು ವಿಚ್ಛಿದ್ರಗೊಳಿಸಲು ಆರ್‌ಎಸ್‌ಎಸ್ ರಣತಂತ್ರ : ಯೋಗೇಂದ್ರ ಯಾದವ್

ಮಂಗಳವಾರ, 25 ಮಾರ್ಚ್ 2014 (16:44 IST)
ಆಮ್ ಆದ್ಮಿ ಪಕ್ಷವನ್ನು ವಿಚ್ಛಿದ್ರಗೊಳಿಸಲು ಆರ್‌ಎಸ್‌ಎಸ್ ಕ್ಷುದ್ರ ತಂತ್ರಗಳನ್ನು ಹೆಣೆಯುತ್ತಿದೆ ಎಂದು ಆಪ್‌ನ ಹಿರಿಯ ನಾಯಕ ಯೋಗೇಂದ್ರ ಯಾದವ್ ಆರೋಪಿಸಿದ್ದಾರೆ.
PTI

"ಆಪ್ ಪಕ್ಷದ ಗುರಗಾಂವ್ ಜಿಲ್ಲೆಯ ಸಂಚಾಲಕರಾದ ರಮೇಶ್ ಯಾದವ್ 'ಆಪ್ ಬಿಜೆಪಿಯನ್ನು ಕಚ್ಚುವ ಒಂದು ನಾಗರ' ಎಂದು ಹೇಳಿ ಸಿಕ್ಕಿಬಿದ್ದಿದ್ದರು" ಎಂದು ಆಪ್ ಪಕ್ಷದಿಂದ ಗುರ್ಗಾವ್‌ನಲ್ಲಿ ಸ್ಪರ್ಧಿಸುತ್ತಿರುವ ಯಾದವ್ ಮಾಧ್ಯಮದವರಿಗೆ ಹೇಳಿದರು.

" ಗುರಗಾಂವ್‌ನ ಕೆಲವು ಆಪ್ ಮುಖಗಳು ವಾಸ್ತವವಾಗಿ ಬಿಜೆಪಿಗಾಗಿ ಕೆಲಸ ಮಾಡುತ್ತಿವೆ" ಎಂದು ರಮೇಶ ಯಾದವ್‌ರವರನ್ನು ಉಲ್ಲೇಖಿಸಿ ಅವರು ಹೇಳಿದರು.

" ಭೀಮ್ ನಾಗರನಲ್ಲಿ ನಡೆದ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರ ಗುರಗಾಂವ್ ಸಾರ್ವಜನಿಕ ಸಭೆ ಸಂದರ್ಭದಲ್ಲಿ ಗಲಾಟೆಯನ್ನು ಮಾಡಿದ್ದ ರಮೇಶ್ ಯಾದವ್, ನಂತರ ತಮ್ಮ ಬೆಂಬಲಿಗರೊಂದಿಗೆ ಪಕ್ಷವನ್ನು ತ್ಯಜಿಸಿದ್ದರು" .

" ಆರ್‌ಎಸ್‌ಎಸ್‌ನ ಸೈಧಾಂತಿಕ ತತ್ವದ ಮೇಲೆ ನಡೆಯುವ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವಂತೆ ಆಪ್ ಕಾರ್ಯಕರ್ತರಿಗೆ ರಹಸ್ಯವಾಗಿ ಹೇಳುತ್ತಿದ್ದ ಸಂದರ್ಭದಲ್ಲಿ ಯೋಗೇಂದ್ರ ಯಾದವ್ ಸಿಕ್ಕಿಬಿದ್ದಿದ್ದರು" .

"ನಾವು ರಮೇಶ್ ಯಾದವ್‌ರನ್ನು ನಿರ್ಲಕ್ಷಿಸುತ್ತಿದ್ದೇವೆ, ಆದರೆ ಆರಂಭದಿಂದಲೂ ಅವರು ಆಪ್‌ನೊಂದಿಗೆ ಜೋಡಿಸಲ್ಪಟ್ಟಿರುವ ಕಾರಣದಿಂದ ಅವರನ್ನು ಉಚ್ಚಾಟಿಸಲು ಸಾಧ್ಯವಿಲ್ಲ" .

"5 ದಿನಗಳ ಹಿಂದೆ ಪಕ್ಷದ ಕಾರ್ಯಕರ್ತನೊಬ್ಬ 8 ನಿಮಿಷಗಳ ಆಡಿಯೋ ಒಂದನ್ನು ತಂದು ಕೊಟ್ಟಿದ್ದಾರೆ. ಅದರಲ್ಲಿ ರಮೇಶ ಯಾದವ್ ಆಪ್‌ನ್ನು ಕಾಂಗ್ರೆಸ್ಸಿನ ಬಿ ತಂಡ, ಕೋಬ್ರಾ, ಮತ್ತು ಕ್ಯಾನ್ಸರ್‌ಗಿಂತ ಕೆಟ್ಟದೆಂದು ಜರಿದಿದ್ದಾರೆ" .

"ಆರ್‌ಎಸ್‌ಎಸ್ ಆರ್ಥಿಕವಾಗಿ ಸದೃಢವಾದ ಸಂಘಟನೆಯಾಗಿದ್ದು ಆಪ್‌‌ನ್ನು ಒಡೆಯಲು ಎಲ್ಲ ರೀತಿಯ ತಂತ್ರಗಳನ್ನು ಬಳಸುತ್ತಿದೆ. ಕಾರಣ ಕಾಂಗ್ರೆಸ್ ಈಗಾಗಲೇ ಸೋಲನ್ನು ಒಪ್ಪಿಕೊಂಡಿದ್ದು, ಬಿಜೆಪಿ ಆಪ್‌ನಿಂದ ಬಲವಾದ ಸವಾಲನ್ನು ಎದುರಿಸುತ್ತಿದೆ" ಎಂದು ಆಪ್ ಪಕ್ಷದ ಮುಖಂಡ ಯೋಗೇಂದ್ರ ಯಾದವ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ