ಇಂದು ಜಾರಿಯಾಗಲಿದೆ ಕಾಂಗ್ರೆಸ್ ಪ್ರಣಾಳಿಕೆ

ಬುಧವಾರ, 26 ಮಾರ್ಚ್ 2014 (12:57 IST)
PTI
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಂಪೂರ್ಣವಾಗಿ ಸಜ್ಜಾಗಿದೆ. ತನ್ನ ಟಿಕೆಟ್ ಹಂಚಿಕೆಯ ಹೆಚ್ಚಿನ ಭಾಗವನ್ನು ಪಕ್ಷ ಪೂರೈಸಿದೆ. ಇಂದು ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಮತ್ತು ರಾಹುಲ್ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ಜಾರಿ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಪಾರ್ಟಿಯ ಮುಖ್ಯ ಕಛೇರಿಯಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ರಾಹುಲ್ ಗಾಂಧಿ ಮತ್ತು ಪಕ್ಷದ ಉನ್ನತ ನಾಯಕರ ಸಮ್ಮುಖದಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಜಾರಿಗೊಳಿಸಲಿದ್ದಾರೆ.

ಪ್ರಣಾಳಿಕೆಯಲ್ಲಿ ಉದ್ಯೋಗ ಮತ್ತು ಆರೋಗ್ಯ ಹಕ್ಕಿನ ವಿಷಯದಲ್ಲಿ ಕಾನೂನು ರಚಿಸುವ ವಾಗ್ದಾನ ನೀಡುವುದರ ಜತೆಗೆ ಉದ್ಯೋಗದ ಅವಕಾಶಗಳ ಸೃಷ್ಟಿ ಮತ್ತು ಉತ್ಪಾದನಾ ಕ್ಷೇತ್ರಕ್ಕೆ ಒತ್ತು ನೀಡುವ ಸಂಭನೀಯತೆ ಇದೆ ಎಂದು ಹೇಳಲಾಗುತ್ತಿದೆ.ಎ.ಕೆ. ಆಂಟನಿಯವರ ಅಧ್ಯಕ್ಷತೆಯ ಘೋಷಣಾ ಪತ್ರ ಸಮಿತಿ ಇತ್ತೀಚಿಗೆ ಘೋಷಣಾ ಪತ್ರಕ್ಕೆ ಅಂತಿಮ ರೂಪ ಕೊಟ್ಟಿತ್ತು.

ನಿನ್ನೆ ದೆಹಲಿ ತಲುಪಿದ ಪ್ರಿಯಾಂಕಾ ಗಾಂಧಿ ಪತ್ರದ ಕುರಿತು ಪಕ್ಷದ ನಾಯಕರ ಜತೆ ಚರ್ಚೆ ನಡೆಸಿದರು.

ರಾಹುಲ್ ಗಾಂಧಿ ಕೂಡ ಅನೇಕ ದಿನಗಳಿಂದ ಈ ಕುರಿತು ಸಾಮಾನ್ಯ ನಾಗರಿಕರ ಜತೆ ಕೂಡ ಚರ್ಚೆ ಮಾಡಿದ್ದಾರೆ. ಅವರ ಅಭಿಪ್ರಾಯದಲ್ಲಿ ಪ್ರಣಾಳಿಕೆಯಲ್ಲಿ ಸಾಮಾನ್ಯ ಜನರ ಮಾತುಗಳಿಗೆ ಅವಕಾಶ ನೀಡಲಾಗುವುದು. ರಾಹುಲ್ ತಮ್ಮ ಭರವಸೆಯನ್ನು ಎಷ್ಟರ ಮಟ್ಟಿಗೆ ಈಡೇರಿಸುತ್ತಾರೆ ಎಂದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ