ಇಂದು ಮೂರನೇ ಹಂತದ ಮತದಾನ; ಹಲವಾರು ದಿಗ್ಗಜರ ಭವಿಷ್ಯ ನಿರ್ಧಾರ

ಗುರುವಾರ, 10 ಏಪ್ರಿಲ್ 2014 (09:02 IST)
ದೆಹಲಿಯ 7 ಕ್ಷೇತ್ರಗಳನ್ನೊಳಗೊಂಡಂತೆ ದೇಶದ 91 ಲೋಕಸಭಾ ಕ್ಷೇತ್ರಗಳಿಗೆ ಇಂದು ಬೆಳಿಗ್ಗೆಯಿಂದ ಮತದಾನ ಪ್ರಾರಂಭವಾಗಿದೆ. ಮೂರನೇ ಹಂತದಲ್ಲಿ ಇಂದು 11 ರಾಜ್ಯಗಳಲ್ಲಿ ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣೆ ನಡೆಯುತ್ತಿದ್ದೆ.

* ಆರ್‌ಎಸ್‌ಎಸ್ ಪ್ರಮುಖ ಮೋಹನ್ ಭಾಗವತ್ ನಾಗಪುರದಲ್ಲಿ ಬೆಳಿಗ್ಗೆ 7.30ಕ್ಕೆ ಮತ ಚಲಾಯಿಸಿದರು.

* ರಾಷ್ಟ್ರ ರಾಜಧಾನಿಯಲ್ಲಿ ಒಂದೇ ಹಂತದ ಮತದಾನ.

* ಕಪಿಲ್ ಸಿಬಲ್, ಅಜಯ್ ಮಾಕನ್, ಶಶಿ ಥರೂರ್, ಕಮಲ್‌ನಾಥ್, ಪವನ್ ಬನ್ಸಲ್, ಮೀರಾ ಕುಮಾರ್, ನಿತಿನ್ ಗಡ್ಕರಿ, ವಿ ಕೆ ಸಿಂಗ್, ಕಿರಣ್ ಖೇರ್, ಹರ್ಷವರ್ಧನ್, ಮೀನಾಕ್ಷಿ ಲೇಖಿ, ಶಾಝಿಯಾ ಇಲ್ಮಿ, ಯೋಗೇಂದ್ರ ಯಾದವ್, ಗುಲ್ ಪನಾಗ್, ಜಯಪ್ರದಾ ಸಮೇತ ಹಲವಾರು ದಿಗ್ಗಜರ ಭವಿಷ್ಯ ಇಂದು ನಿರ್ಧಾರವಾಗಲಿದೆ.

* ಎಲ್ಲ ಸ್ಧಳಗಳಲ್ಲಿ ಮತದಾರರು ಬಹುಉತ್ಸಾಹದಿಂದ ಓಟನ್ನು ಚಲಾಯಿಸುತ್ತಿರುವುದು ಕಂಡುಬಂತು. ಬೆಳಿಗ್ಗೆನಿಂದಲೇ ಮತಗಟ್ಟೆಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಂತಿದ್ದರು.

* ಬಿಹಾರ್, ಝಾರಕಂಡ್,ಒಡಿಸಾ, ಜಮ್ಮು ಕಾಶ್ಮೀರ್, ಛತ್ತೀಸ್‌ಗಢ್, ಲಕ್ಷ್ಯದ್ವೀಪ್,ಚಂದೀಗಡ ಮತ್ತು ಅಂಡಮಾನ್ ನಿಕೋಬಾರ್‌ನಲ್ಲೂ ಮತದಾನ ಬಿರುಸಿನಿಂದ ಸಾಗಿದೆ.

* ದೆಹಲಿ, ಉತ್ತರಪ್ರದೇಶ, ಮಧ್ಯಪ್ರದೇಶ, ಕೇರಳ, ಹರಿಯಾಣಾ, ಮಹಾರಾಷ್ಟ್ರಗಳಲ್ಲಿ ಪ್ರಾತಃ ಕಾಲದಿಂದಲೂ ವೋಟಿಂಗ್ ನಡೆಯುತ್ತಿದೆ.

ವೆಬ್ದುನಿಯಾವನ್ನು ಓದಿ