ಇಂದೋರ್‌ನಲ್ಲಿ ಇಳಿಸಲಾಯಿತು ಪ್ರಶಾಂತ್ ಭೂಷಣ ಟೋಪಿ

ಆಪ್ ಅಭ್ಯರ್ಥಿ ಅನಿಲ್ ತ್ರಿವೇದಿಯವರ ಪರ ಪ್ರಚಾರ ನಡೆಸಲು ನಗರಕ್ಕೆ ಆಗಮಿಸಿದ ಆಪ್ ನಾಯಕ ಪ್ರಶಾಂತ್ ಭೂಷಣರವರ ಜತೆ ಪತ್ರಿಕಾಗೋಷ್ಠಿಯಲ್ಲಿ ಅಸಭ್ಯವಾಗಿ ನಡೆದುಕೊಳ್ಳಲಾಯಿತು. ಅಲ್ಲದೇ ಅವರ ತಲೆಯ ಮೇಲಿದ್ದ ಟೋಪಿಯನ್ನು ತೆಗೆದು ಹಾಕಲಾಯಿತು ಎಂದು ವರದಿಯಾಗಿದೆ.
PTI

ಭೂಷಣ ಪತ್ರಕರ್ತರ ಜತೆ ಮಾತನಾಡುತ್ತಿದ್ದ ಸಮಯದಲ್ಲಿ ಅವರ ಹಿಂದಕ್ಕೆ ಹೋದ ಒಬ್ಬ ವ್ಯಕ್ತಿ ಅವರ ತಲೆಯಿಂದ ಟೋಪಿಯನ್ನು ತೆಗೆದ ಮತ್ತು ಭೂಷಣ ಪಾಕಿಸ್ತಾನದ ಏಜಂಟ್ ಎಂದು ಆರೋಪಿಸಿದ. ಆತನ ಹೆಸರು ರಘುವಂಶಿ ಎಂದು ಹೇಳಲಾಗುತ್ತಿದೆ. ನಂತರ ಪರಸ್ಪರ ಎದುರಾದ ಬಿಜೆಪಿ ಮತ್ತು ಆಪ್ ಕಾರ್ಯಕರ್ತರು ಗಲಾಟೆ ಪ್ರಾರಂಭಿಸಿದರು.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಶಾಂತ್ ಭೂಷಣ "ಇದು ಯೋಜಿತ ಷಡ್ಯಂತ್ರ, ಇದರ ಹಿಂದೆ ಬಿಜೆಪಿಯ ಕೈವಾಡವಿದೆ. ಹೆಚ್ಚುತ್ತಿರುವ ಆಪ್ ಜನಪ್ರಿಯತೆ ಬಿಜೆಪಿಗೆ ಸಹ್ಯವಾಗುತ್ತಿಲ್ಲ" ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ