ಕಾಂಗ್ರೆಸ್ ಮತ್ತು ಡಿಎಮ್‌ಡಿಕೆಯೊಂದಿಗೆ 'ಮೈತ್ರಿ ಸಾಧ್ಯತೆ ಇಲ್ಲ : ಕರುಣಾನಿಧಿ

ಶುಕ್ರವಾರ, 14 ಮಾರ್ಚ್ 2014 (15:51 IST)
PR
ಡಿಎಂಡಿಕೆಯ ಜತೆ ಸೇರುತ್ತದೆ ಅಥವಾ ಕಾಂಗ್ರೆಸ್‌ನ ಆಹ್ವಾನವನ್ನು ಡಿಎಂಕೆ ಸ್ವೀಕರಿಸುತ್ತದೆ ಎಂಬ ಊಹಾಪೋಹಗಳಿಗೆ ವಿರುದ್ಧವಾಗಿ ಶನಿವಾರ ಪ್ರಾರಂಭವಾಗಲಿರುವ ತನ್ನ ಎರಡು ದಿನಗಳ ತಿರುಚ್ಚಿ ಸಮಾವೇಶದಲ್ಲಿ "ಜಾತ್ಯತೀತ" ಎಂಬ ಫಲಕ ದಡಿ ಪ್ರಚಾರ ನಡೆಸಲು ಡಿಎಂಕೆ ಯೋಜನೆ ರೂಪಿಸುತ್ತಿದೆ.

ಇಂದು ಡಿಎಂಕೆ ಅಧ್ಯಕ್ಷ ಎಂ ಕರುಣಾನಿಧಿ ತಿರುಚ್ಚಿಗೆ ರಸ್ತೆ ಪ್ರವಾಸವನ್ನು ಕೈಗೊಳ್ಳುತ್ತಿದ್ದಾರೆ. ಇದಕ್ಕಾಗಿ ವಿಶಾಲವಾದ ವ್ಯವಸ್ಥೆಗಳನ್ನು ಮಾಡಿರುವ ಪಕ್ಷ ಡಿಎಂಕೆ ನೇತೃತ್ವದ ಜಾತ್ಯತೀತ ಒಕ್ಕೂಟವನ್ನು ಪ್ರದರ್ಶಿಸುವ ಕಾರ್ಯಕ್ರಮಕ್ಕೆ ಅಂತಿಮ ಸ್ಪರ್ಶ ನೀಡುತ್ತಿದೆ.

ವಿಸಿಕೆ, ಎಂಎಂಕೆ, ಪಿಟಿ ಹಾಗೂ ಐಯು ಎಂ ಎಲ್, ಡಿಎಂಕೆ ಮೈತ್ರಿಕೂಟದಲ್ಲಿರುವ ಪಕ್ಷಗಳಾಗಿವೆ. ಡಿಎಂಕೆ, ತನ್ನ ಈ ಹಿಂದಿನ ಮಿತ್ರ ಪಕ್ಷ ಕಾಂಗ್ರೆಸ್‌ನ್ನು ದೂರೀಕರಿಸಿ ಬಿಜೆಪಿಯ ಜತೆ ಮೈತ್ರಿ ಮಾಡಿಕೊಳ್ಳುವ ಲಕ್ಷಣಗಳು ಕಾಣುತ್ತಿವೆ. ಜಾತ್ಯತೀತ ಒಕ್ಕೂಟವನ್ನು ರೂಪಿಸುವ ಕಲ್ಪನೆಯನ್ನು ಮೊದಲು ಯೋಜಿಸಿದ್ದು ಕಾಂಗ್ರೆಸ್.

ತಿರುಚ್ಚಿ ಹೊರಡುವ ಮೊದಲು ಮಾತನಾಡಿದ ಕರುಣಾನಿಧಿ "ಕಾಂಗ್ರೆಸ್ ಅಥವಾ ಡಿಎಂಡಿಕೆ ಮೈತ್ರಿ ಕುರಿತು ಯಾವುದೇ ಸೂಚನೆ ಅಥವಾ ಸಾಧ್ಯತೆ ಇಲ್ಲ." ಎಂದು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ