ಕೊನೆಗೂ ಮೌನ ಮುರಿದು ತಾನು ವಿವಾಹಿತ ಎಂದು ಒಪ್ಪಿಕೊಂಡ ಮೋದಿ.

ಗುರುವಾರ, 10 ಏಪ್ರಿಲ್ 2014 (10:03 IST)
ತಾವು ವಿವಾಹಿತರೇ ಎಂಬುದರ ಬಗ್ಗೆ ಯಾವಾಗಲೂ ರಹಸ್ಯ ಕಾಪಾಡಿಕೊಂಡು ಬಂದಿದ್ದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನಿನ್ನೆ ವಡೋದರಾದಲ್ಲಿ ನಾಮಪತ್ರವನ್ನು ಸಲ್ಲಿಸುವ ವೇಳೆ ತಾವು ವಿವಾಹಿತ ಎಂದು ನಮೂದಿಸುವುದರ ಮೂಲಕ ಸ್ಪೋಟಕ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
PTI

ಇದೇ ಮೊದಲ ಬಾರಿ ಈ ಸತ್ಯವನ್ನು ಬಹಿರಂಗ ಪಡಿಸಿರುವ ಮೋದಿ ತಮ್ಮ ಪತ್ನಿಯ ಹೆಸರು ಯಶೋಧಾ ಬೆನ್ ಎಂದು ಪತ್ನಿಯ ಹೆಸರನ್ನು ಕೇಳುವ ಕಾಲಮ್‌ನಲ್ಲಿ ನಮೂದಿಸಿದ್ದಾರೆ. ಆಕೆ ವಡ್ನಾಗರ್ ಹತ್ತಿರದ ಬ್ರಹ್ಮನವಾಡಾದ ನಿವಾಸಿಯಾಗಿದ್ದು, ಶಿಕ್ಷಕಿಯಾಗಿ ನಿವೃತ್ತಳಾಗಿದ್ದಾಳೆ ಎಂದು ಹೇಳಲಾಗುತ್ತಿದೆ.

ಮೋದಿ ತಮ್ಮ 17ನೇ ವಯಸ್ಸಿನಲ್ಲಿ ಮದುವೆಯಾಗಿದ್ದು, ಯಸೋಧಾ ಬೆನ್ ಜತೆ ಕೇವಲ 3 ತಿಂಗಳ ಸಂಸಾರಿಕ ಜೀವನವನ್ನು ನಡೆಸಿದ್ದು, ಆನಂತರ ಸಂಘ ಪರಿವಾರದ ಪ್ರಭಾವಕ್ಕೆ ಒಳಗಾದ ಅವರು ಆಕೆಯಿಂದ ದೂರವಾದರು ಎಂದು ವರದಿಯಾಗಿದೆ.

2001, 2002, 2007 ಮತ್ತು 2012ರಲ್ಲಿ ನಡೆದ 2012ರ ವಿಧಾನ ಸಭಾ ಚುನಾವಣೆಗಳಲ್ಲಿ ಮೋದಿ ಪತ್ನಿಯ ಹೆಸರನ್ನು ಕೇಳುವ ಕಾಲಮ್‌ನ್ನು ಖಾಲಿ ಬಿಟ್ಟಿದ್ದರು.ಆದರೆ, 2014 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ತಮ್ಮ ಪತ್ನಿಯ ಹೆಸರನ್ನು ನಮೂದಿಸಿರುವ ಮೋದಿ, ಆಕೆಯ ಹೆಸರಿನಲ್ಲಿರುವ ಸ್ವತ್ತುಗಳ ಮೌಲ್ಯ ಕೇಳುವ ಕಾಲಮ್‌ನಲ್ಲಿ, ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಬರೆದಿದ್ದಾರೆ.

ಬಹುಶಃ ತಾನು ಪ್ರಧಾನಿಯಾಗುವುದು ಖಚಿತ ಎಂದು ನಂಬಿರುವ ಮೋದಿ ಯಾವುದೇ ಕಳಂಕಕ್ಕೆ ಆಸ್ಪದ ಕೊಡಬಾರದು ಎಂದು ಮೌನ ಮುರಿದು ಈ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಮೋದಿ ತಮ್ಮ ವೈವಾಹಿಕ ಸ್ಥಿತಿಯ ಬಗ್ಗೆ ಸ್ಪಷ್ಟ ಪಡಿಸಬೇಕು ಎಂದು ಕಾಂಗ್ರೆಸ್ ಸಹ ಒತ್ತಾಯ ಪಡಿಸುತ್ತಿತ್ತು.

ತಾನು 1.50 ಕೋಟಿ ಸಂಪತ್ತಿನ್ನು ಹೊಂದಿದ್ದೇನೆ ಎಂದು ಮೋದಿ ಸ್ಪಷ್ಟ ಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ