ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ಮುಖ್ಯಮಂತ್ರಿಗಳಲ್ಲಿ ಮೋದಿಗೆ ಅಗ್ರಸ್ಥಾನ

ಗುರುವಾರ, 20 ಮಾರ್ಚ್ 2014 (15:34 IST)
PR
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸರ್ಚ್ ಇಂಜಿನ್ ದೈತ್ಯ ಕಂಪೆನಿಯಾದ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.

ಗೂಗಲ್ ಟ್ರೆಂಡ್ ಪ್ರಕಾರ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅಗ್ರಸ್ಥಾನದಲ್ಲಿದ್ದು, ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಎರಡನೇ ಸ್ಥಾನದಲ್ಲಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂತರದ ಸ್ಥಾನಗಳನ್ನು ಪಡೆದಿದ್ದಾರೆ.

ಮುಖ್ಯಮಂತ್ರಿಗಳಾದ ಶಿವರಾಜ್ ಸಿಂಗ್(ಮಧ್ಯಪ್ರದೇಶ), ವಸುಂಧರಾ ರಾಜೇ( ರಾಜಸ್ಥಾನ), ತರುಣ್ ಗೊಗೊಯಿ (ಆಸ್ಸಾಂ), ಒಮರ್ ಅಬ್ದುಲ್ಲಾ (ಜೆಆಂಡ್‌ಕೆ) ಮತ್ತು ಒಮನ್ ಚಾಂಡಿ ನಂತರದ ಸ್ಥಾನಗಳನ್ನು ಪಡೆದಿದ್ದಾರೆ.

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಯಾವ ರೀತಿಯ ಪಾತ್ರವಹಿಸುತ್ತಾರೆ ಎನ್ನುವ ಬಗ್ಗೆ ಹೊಸ ಮಾಹಿತಿ ಬಹಿರಂಗವಾಗುತ್ತದೆ.

ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳಲ್ಲಿ ತರುಣ್ ಗೊಗೊಯಿ, ಒಮನ್ ಚಾಂಡಿ, ಭೂಪಿಂದರ್ ಹೂಡಾ, ವೀರಭದ್ರ ಸಿಂಗ್ ಮತ್ತು ಹರೀಷ್ ರಾವತ್ ಅಗ್ರಸ್ಥಾನವನ್ನು ಪಡೆದಿದ್ದಾರೆ.

ಬಿಜೆಪಿ ಪಕ್ಷದ ಮುಖ್ಯಮಂತ್ರಿಗಳಲ್ಲಿ ನರೇಂದ್ರ ಮೋದಿ, ವಸುಂಧರಾ ರಾಜೇ, ಶಿವರಾಜ್ ಸಿಂಗ್ ಚೌಹಾನ್, ಮನೋಹರ್ ಪಾರಿಕ್ಕರ್ ಮತ್ತು ರಮಣ್ ಸಿಂಗ್ ಟಾಪ್ ಐವರಲ್ಲಿ ಸ್ಥಾನ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ