ಚುನಾವಣಾ ಆಯೋಗದಿಂದ ಅಮಿತ್ ಶಾ ನಿರ್ಭಂದ ರದ್ದು: ಸಮಾಜವಾದಿ ಪಕ್ಷ ಕಿಡಿ

ಶುಕ್ರವಾರ, 18 ಏಪ್ರಿಲ್ 2014 (13:36 IST)
ನರೇಂದ್ರ ಮೋದಿಯವರ ಆಪ್ತ ಅಮಿತ್ ಶಾ, ಚುನಾವಣಾ ಪ್ರಚಾರ ನಡೆಸುವುದಕ್ಕೆ ತಡೆವೊಡ್ಡಿ ಹಾಕಿದ್ದ ನಿರ್ಬಂಧವನ್ನು ಚುನಾವಣಾ ಆಯೋಗ ತೆಗೆದು ಹಾಕಿರುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸಮಾಜವಾದಿ ಪಕ್ಷ ಆಯೋಗಕ್ಕೆ ಮನವಿ ಸಲ್ಲಿಸಿದೆ.
PTI

ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಲ್ಲದೇ ತಮ್ಮ ಪಕ್ಷದ ಹಿರಿಯ ನಾಯಕ ಅಜಂ ಖಾನ್ ಮೇಲೆ ಹಾಕಿರುವ ನಿರ್ಬಂಧವನ್ನು ತೆಗೆದು ಹಾಕುವಂತೆ ಆಯೋಗಕ್ಕೆ ಕೇಳಿಕೊಂಡಿದೆ.

ಶಾ ಮೇಲಿನ ನಿರ್ಬಂಧವನ್ನು ತೆಗೆದು ಹಾಕಲು ಸಾಧ್ಯ ಎಂದಾದರೆ, ತಮ್ಮ ಪಕ್ಷದ ನಾಯಕ ಅಜಂ ಖಾನ್ ಮೇಲೆ ಪ್ರಚಾರವನ್ನು ನಡೆಸದಂತೆ ಹಾಕಿರುವ ನಿರ್ಬಂಧವನ್ನು ಆಯೋಗ ರದ್ದು ಗೊಳಿಸಬೇಕು. ಆಯೋಗ ಬಿಜೆಪಿ ಮತ್ತು ಅದರ ಪ್ರಧಾನಿ ಅಭ್ಯರ್ಥಿ ಮೋದಿಯ ಒತ್ತಡವನ್ನು ಎದುರಿಸುತ್ತಿದೆ ಎಂದು ಸಮಾಜವಾದಿ ಪಕ್ಷದ ಮಾಯಕ ನರೇಶ ಅಗ್ರವಾಲ್ ಪ್ರತಿಕ್ರಿಯಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಬಿಜೆಪಿಯ ಚುನಾವಣಾ ಉಸ್ತುವಾರಿಯನ್ನು ವಹಿಸಿಕೊಂಡಿರುವ ಅಮಿತ್ ಶಾ ಪ್ರಚಾರ ಭಾಷಣದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಡಿ ಆಯೋಗ ಅವರು ಚುನಾವಣಾ ಪ್ರಚಾರ ನಡೆಸುವುದಕ್ಕೆ ನಿರ್ಬಂಧವನ್ನು ಹಾಕಿತ್ತು.

ನಾನು ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರಲಾರೆ ಎಂದು ಶಾ ಆಯೋಗಕ್ಕೆ ವಿನಂತಿಸಿಕೊಂಡಿದ್ದರಿಂದ ಅವರ ಮೇಲಿನ ನಿಷೇಧವನ್ನು ರದ್ದುಗೊಳಿಸಲಾಗಿದೆ.

ಕಾರ್ಗಿಲ್ ಕದನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಆಯೋಗ ಅಜಂ ಖಾನ್‌ರಿಗೂ ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಸಭೆಗಳು, ಮೆರವಣಿಗೆಗಳು ಅಥವಾ ರೋಡ್ ಶೋ ನಡೆಸದಂತೆ ನಿಷೇಧ ಹೇರಿದೆ.

ವೆಬ್ದುನಿಯಾವನ್ನು ಓದಿ