ಚುನಾವಣೆ ಎಂದರೆ ಕೇವಲ ಅಭಿವೃದ್ಧಿ ಅಲ್ಲ, ಜಾತ್ಯತೀತ ಮೌಲ್ಯಗಳ ಸಂಕೇತ: ಸೋನಿಯಾ

ಮಂಗಳವಾರ, 1 ಏಪ್ರಿಲ್ 2014 (19:05 IST)
ಈ ಲೋಕಸಭಾ ಚುನಾವಣೆ ಕೇವಲ ಅಭಿವೃದ್ಧಿ ಕುರಿತಾಗಿಲ್ಲ. ತನ್ನ ಪಕ್ಷ ಸಂವಿಧಾನದಲ್ಲಿನ ಜಾತ್ಯತೀತ ಮೌಲ್ಯಗಳನ್ನು ಸಂರಕ್ಷಿಸುವಲ್ಲಿ ಹೋರಾಟ ನಡೆಸುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
PR

ಚುನಾವಣಾ ಸಭೆಯೊಂದರಲ್ಲಿ ಬಿಜೆಪಿ ಮತ್ತು ಅದರ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮೇಲೆ ವಾಕ್ ಪ್ರಹಾರ ನಡೆಸಿದ ಅವರು "ಈ ಚುನಾವಣೆ ಕೇವಲ ದೇಶದ ಅಭಿವೃದ್ಧಿಯ ಗುರಿಯನ್ನಿಟ್ಟುಕೊಂಡು ನಡೆಯುತ್ತಿಲ್ಲ. ಇದು ನಮ್ಮ ಸ್ವಾತಂತ್ರ್ಯ ಹೋರಾಟಗಾರರು, ಹಿರಿಯರು ಹೋರಾಟ ಮತ್ತು ನೋವುಗಳನ್ನು ಸಹಿಸಿ ನೀಡಿದ ಸಾಂವಿಧಾನಿಕ ಚೌಕಟ್ಟಿನ್ನು ರಕ್ಷಿಸುವು ಗುರಿ ಹೊಂದಿದೆ. ಸಂವಿಧಾನವು ನಮ್ಮ ಜಾತ್ಯಾತೀತ ಮೌಲ್ಯಗಳನ್ನು ಗುರುತಿಸುತ್ತದೆ ಮತ್ತು ಅವುಗಳನ್ನು ಗೌರವಿಸುವುದು ಹೇಗೆ ಎಂದು ನಮಗೆ ಕಲಿಸುತ್ತದೆ" ಎಂದರು.

"ಕಾಂಗ್ರೆಸ್ ಪಕ್ಷ ದೇಶಕ್ಕಾಗಿ ಹೋರಾಟ ನಡೆಸುತ್ತದೆ.ದೇಶ ಕೆಲವರಿಗಷ್ಟೇ ಸೇರಿದ್ದಲ್ಲ. ಅದು ಪ್ರತಿಯೊಬ್ಬರಿಗೂ ಸೇರಿದ್ದು ಮತ್ತು ದೇಶದ ಎಲ್ಲರಿಗೂ ಸಮಾನ ಹಕ್ಕುಗಳಿವೆ".

"ಹಿಂದುಳಿದ ಪ್ರದೇಶ ಮೇವತ್ ಸೇರಿದಂತೆ,ಎಲ್ಲ ಕಡೆ ಮನಮೋಹನ್ ಸಿಂಗ್ ಸರಕಾರ ಇತರ ಸರಕಾರಗಳಿಗೆ ಹೋಲಿಸಿದಲ್ಲಿ ಕಳೆದ 10 ವರ್ಷಗಳ ಅವಧಿಯಲ್ಲಿ ಮೇವತ್ ಜಿಲ್ಲೆ ಸೇರಿದಂತೆ ಇತರ ಪ್ರದೇಶಗಳಲ್ಲಿ ಭಾರಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದೆ" ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ