ದೇಶದಲ್ಲಿ ಮೋದಿಯದಲ್ಲ, ಬಿಜೆಪಿಯ ಅಲೆಯಿದೆ: ಜೋಶಿ

ಸೋಮವಾರ, 14 ಏಪ್ರಿಲ್ 2014 (09:07 IST)
ಭಾರತೀಯ ಜನತಾ ಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಯ ವಿರುದ್ಧ ಅಪರೋಕ್ಷವಾಗಿ ದಾಳಿ ಮಾಡಿರುವ ಪಕ್ಷದ ಹಿರಿಯ ನಾಯಕ ಮುರಳಿ ಮನೋಹರ ಜೋಶಿ "ದೇಶದಲ್ಲಿ ಮೋದಿಯ ಅಲೆಯಿಲ್ಲ, ಬದಲಾಗಿ ಬಿಜೆಪಿಯ ಅಲೆಯಿದೆ" ಎಂದು ಹೇಳಿದ್ದಾರೆ.
PTI

ಪಕ್ಷದ ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿರುವ ಅವರು ಮೋದಿ "ತಮ್ಮ ರಾಜ್ಯದಲ್ಲಿ ಜಾರಿಗೆ ತಂದಿರುವ ಅಭಿವೃದ್ಧಿ ಸೂತ್ರವಾದ ಗುಜರಾತ್ ಮಾದರಿಯನ್ನು ಎಲ್ಲ ರಾಜ್ಯಗಳಿಗೆ ಅನ್ವಯಿಸಲು ಸಾಧ್ಯವಿಲ್ಲ. ಯಾವುದೋ ಒಂದು ರಾಜ್ಯದ ಮಾದರಿಯನ್ನು ಉಳಿದ ಎಲ್ಲ ರಾಜ್ಯಗಳಲ್ಲೂ ಜಾರಿಗೆ ತರುವುದನ್ನು ನಾನು ಒಪ್ಪುವುದಿಲ್ಲ" ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮೋದಿಗಾಗಿ ವಾರಣಾಸಿ ಕ್ಷೇತ್ರವನ್ನು ಬಿಟ್ಟು ಕೊಟ್ಟಿರುವ ಜೋಶಿ, "ಪ್ರಧಾನಮಂತ್ರಿ ಸ್ಥಾನದ ಅಭ್ಯರ್ಥಿ ಕೇವಲ ಉನ್ನತ ಹುದ್ದೆಗಾಗಿ ಮಾತ್ರ ಪಕ್ಷದ ಪ್ರತಿನಿಧಿಯಾಗಿದ್ದಾರೆ ಮತ್ತು ಅವರಿಗೆ ಸಂಪೂರ್ಣ ದೇಶದ ಮತ್ತು ಬಿಜೆಪಿಯ ನಾಯಕರ ಸಮರ್ಥನೆ ಸಿಗುತ್ತಿದೆ" .

"ಮೋದಿ ಪ್ರಧಾನಮಂತ್ರಿ ಸ್ಥಾನದ ಒಬ್ಬ ಅಭ್ಯರ್ಥಿಯಾಗಿದ್ದಾರೆ. ಆದ್ದರಿಂದ ಇದು ವಯಕ್ತಿಕ ವಿಷಯವಾಗುವುದಿಲ್ಲ. ಇದೊಂದು ಪ್ರತಿನಿಧಿತ್ವದ ಅಲೆಯಾಗಿದೆ" ಎಂದು ಎಂದು ಜೋಶಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ