ನರೇಂದ್ರ ಮೋದಿಯನ್ನು ಹೊಗಳಿದ ಕಾಂಗ್ರೆಸ್ ಹಿರಿಯ ನಾಯಕ

ಶನಿವಾರ, 29 ಮಾರ್ಚ್ 2014 (13:24 IST)
PTI
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ತಮ್ಮ ಸ್ವಂತ ಸಾಮರ್ಥ್ಯದಿಂದ ಪ್ರಧಾನಿ ಅಭ್ಯರ್ಥಿಯಾಗುವ ಮಟ್ಟಕ್ಕೆ ಏರಿದ್ದಾರೆ. ಅವರಿಗೆ ಬಡತನದ ಅರಿವಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ರಾಮನಾರಾಯಣ್ ಮೀನಾ ಹೊಗಳಿದ್ದಾರೆ.

ಮತ್ತೊಂದೆಡೆ,ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಮ್ಮ ಸ್ವಂತ ಸಾಮರ್ಥ್ಯದಿಂದ ಮೇಲೆ ಬಂದವರಲ್ಲ. ಅವರಿಗೆ ಬಡತನಜ ಅರಿವು ಕಡಿಮೆಯಾಗಿದೆ. ಬಡತನದ ಬಗ್ಗೆ ಅರಿವು ಮೂಡಿಸಿಕೊಳ್ಳಲು ಒಳ್ಳೆಯ ತಂಡವನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ ಎಂದರು.

ದೇಶದ ಉದ್ಯಮದಲ್ಲಿ ಅಗ್ರಸ್ಥಾನದಲ್ಲಿರುವ ವ್ಯಕ್ತಿಗಳು ನರೇಂದ್ರ ಮೋದಿಯವರನ್ನು ಬೆಂಬಲಿಸುತ್ತಿದ್ದಾರೆ. ಮೋದಿಯ ಜೇಬಿನ ಒಂದು ಭಾಗದಲ್ಲಿ ಅಂಬಾನಿ ಮತ್ತು ಆದಾನಿ ಇದ್ದಾರೆ. ಮತ್ತೊಂದು ಜೇಬಿನಲ್ಲಿ ಆರೆಸ್ಸೆಸ್‌ ಸಂಘಟನೆಯಿದೆ ಎಂದು ಲೇವಡಿ ಮಾಡಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕಾರ್ಯಕರ್ತರ ಶ್ರಮವನ್ನು ಮರೆತಿವೆ. ಕೇವಲ ಗೆಲ್ಲುವ ವ್ಯಕ್ತಿಗೆ ಮಾತ್ರ ಟಿಕೆಟ್ ನೀಡುತ್ತಿವೆ ಎಂದು ಆರೋಪಿಸಿದರು.

ಬಾರ್ಮೆರ್ ಕ್ಷೇತ್ರದಲ್ಲಿ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರನ್ನು ಕೈ ಬಿಟ್ಟು ಸೋನಾರಾಮ್ ಅವರಿಗೆ ಟಿಕೆಟ್ ನೀಡಿರುವುದು ನೋಡಿದಲ್ಲಿ ಬಿಜೆಪಿ ಪಕ್ಷಕ್ಕೆ ಕೇವಲ ಅಧಿಕಾರದ ಹಸಿವು ಬಯಸುತ್ತಿದೆ ಎನ್ನುವುದು ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ರಾಮನಾರಾಯಣ್ ಮೀನಾ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ