ನರೇಂದ್ರ ಮೋದಿ ಹೆಸರಲ್ಲಿ ನಿರ್ಮಾಣವಾಯಿತು ನಮೋನಮೋ ದೇವಾಲಯ

ಶನಿವಾರ, 25 ಜನವರಿ 2014 (21:02 IST)
PR
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯನ್ನು ಹೊಗಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಗುಜರಾತ್‌ನ ಕೌಶಂಬಿ ಜಿಲ್ಲೆಯ ಕುಗ್ರಾಮದ ನಿವಾಸಿಗಳು ಮೋದಿಗಾಗಿ ದೇವಾಲಯ ನಿರ್ಮಾಣ ಮಾಡಿರುವುದು ವಿಶೇಷವಾಗಿದೆ.

ಕೌಶಂಬಿ ಜಿಲ್ಲೆಯ ಭಾಗವಾನ್‌ಪುರ್ ಗ್ರಾಮಸ್ಥರು ನರೇಂದ್ರ ಮೋದಿಯನ್ನು ದೇವರೆಂದು ಪೂಜಿಸಲು ನಿರ್ಧರಿಸಿದ್ದು ಅವರನ್ನು ಸ್ವಾಮಿ ನರೇಂದ್ರ ಮೋದಿ ಎಂದು ಕರೆಯುತ್ತಿದ್ದಾರೆ. ಮೋದಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು ದೇವಾಲಯವನ್ನು ನಮೋ ನಮೋ ಮಂದಿರ ಎಂದು ಕರೆಯುತ್ತಿದ್ದಾರಂತೆ.

ಗ್ರಾಮಸ್ಥರು ಪ್ರತಿನಿತ್ಯ ನಮೋ ನಮೋ ದೇವಾಲಯಕ್ಕೆ ಭೇಟಿ ನೀಡಿ ದೀಪವನ್ನು ಬೆಳಗಿಸುತ್ತಿದ್ದು, ಮೋದಿ ದೇಶದ ಪ್ರಧಾನಿಯಾಗುವವರೆಗೆ ಸುಮಾರು 125 ದಿನಗಳ ಕಾಲ ನಿರಂತರವಾಗಿ ಬೆಳಗಲಿದೆ ಎಂದು ಗ್ರಾಮದ ಮುಖಂಡರು ತಿಳಿಸಿದ್ದಾರೆ.

ಬಿಜೆಪಿ ಮುಖಂಡರು ಗ್ರಾಮಸ್ಥರಿಗೆ ಆರ್ಥಿಕ ಸಹಾಯ ನೀಡಿ ದೇವಾಲಯ ನಿರ್ಮಾಣಕ್ಕೆ ನೆರವಾಗಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಆದರೆ, ಆರೋಪಗಳಿಗೆ ಕ್ಯಾರೇ ಎನ್ನದ ದೇವಾಲಯದ ಅರ್ಚಕ ಮೋದಿಯನ್ನು ಪೂಜಿಸುತ್ತಿರುವುದು ದೇಶದ ಉತ್ತಮ ಭವಿಷ್ಯಕ್ಕಾಗಿ ಎಂದು ಹೇಳುತ್ತಾರೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಮಾತ್ರ ದೇಶದಲ್ಲಿ ಸ್ಥಿರತೆ, ಸಂಪನ್ಮೂಲ, ಭದ್ರತೆ ಮತ್ತು ಉತ್ತಮ ಭವಿಷ್ಯ ತರುವ ತಾಕತ್ತಿದೆ ಎನ್ವುತ್ತಾರೆ ಗ್ರಾಮಸ್ಥರು.

ವೆಬ್ದುನಿಯಾವನ್ನು ಓದಿ