ಬದುಕು ಟಿ20 ಪಂದ್ಯದ ತರಹ: ಪಿ.ಚಿದಂಬರಮ್

ಮಂಗಳವಾರ, 1 ಏಪ್ರಿಲ್ 2014 (08:53 IST)
PTI
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರುವ ತಮ್ಮ ನಿರ್ಧಾರ ನ್ಯಾಯೋಚಿತ ಎಂದಿರುವ ಕೇಂದ್ರ ಮಂತ್ರಿ ಪಿ.ಚಿದಂಬರಮ್ ಬದುಕು ಟಿ20 ಪಂದ್ಯದ ತರಹ, "ಜೀವನದ ಕೊನೆಯ 10 ಓವರ್‌ಗಳನ್ನು ಹೇಗೆ ಆಡಬೇಕು ಎಂದು ನಾವೇ ನಿರ್ಧರಿಸಬೇಕು" ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಮುಖ್ಯ ಕಛೇರಿಯಲ್ಲಿ ಮಾತನಾಡುತ್ತಿದ್ದ ಚಿದಂಬರಮ್ ಕಳೆದ 30 ವರ್ಷಗಳಲ್ಲಿ "8 ಬಾರಿ ಸ್ಪರ್ಧಿಸಿದ್ದೇನೆ. ಬದುಕು ಒಂದೇ ಸಲ ಸಿಗುವಂತಹದ್ದು. ಇದು ಟಿ20 ಅಥವಾ 50 ಓವರ್‌ಗಳ ಕ್ರಿಕೆಟ್ ತರಹ. ಹಾಗಾಗಿ ಬದುಕಿನ ಕೊನೆಯ 10 ಓವರ್‌ಗಳನ್ನು ಯಾವ ರೀತಿಯಲ್ಲಿ ಆಡಬೇಕು ಎಂದು ನಾವೇ ನಿರ್ಧರಿಸಬೇಕು" ಎಂದು ಉದ್ಘರಿಸಿದರು.

ಚುನಾವಣೆಯಲ್ಲಿ ಸೋಲುವ ಭಯದಿಂದ ನೀವು ಸ್ಪರ್ಧಿಸುತ್ತಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು " 1999ರಲ್ಲಿ ನಾನು ಸೋತಿದ್ದೆ. ಆದರೆ 2004, 2009ರಲ್ಲಿ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಯಾರೂ ತಡೆಯಲಿಲ್ಲ" ಎಂದು ಹೇಳಿದರು.

"ನಾನು ಪಕ್ಷಕ್ಕಾಗಿ ಕೆಲಸ ಮಾಡುತ್ತಿರುತ್ತೇನೆ. ಯಾತ್ರೆ ಮಾಡಲು, ಓದಲು, ಬರೆಯಲು ಬಯಸಿದ್ದೇನೆ ಎಂದ ಅವರಿಗೆ ಆತ್ಮಕತೆ ಬರೆಯುತ್ತೀರಾ ಎಂದು ಕೇಳಿದಾಗ ನಾನು ಆತ್ಮಕತೆ ಬರೆಯುವಷ್ಟು ಅನುಭವಿ ಅಲ್ಲ" ಎಂದುತ್ತರಿಸಿದರು.

ವಾರಣಾಸಿಯಲ್ಲಿ ನೀವು ಮೋದಿಗೆ ಸವಾಲೆಸೆಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು "ನಾನು ಅವರ ವಿರುದ್ಧ ಸ್ಪರ್ಧಿಸ ಬಯಸುತ್ತೇನೆ. ಆದರೆ ನನಗೆ ಹಿಂದಿ ಬರುವುದಿಲ್ಲ. ಪಕ್ಷ ಮೋದಿ ವಿರುದ್ಧ ಬಲಿಷ್ಠ ಎದುರಾಳಿಯನ್ನು ಹುಡುಕುತ್ತಿದೆ "ಎಂದರು.

ವೆಬ್ದುನಿಯಾವನ್ನು ಓದಿ