ಬಿಜೆಪಿಯನ್ನು ಹಣಿಯಲು ಕಾಂಗ್ರೆಸ್ಸೇತರ ಮೈತ್ರಿಯೇ ಪರ್ಯಾಯ: ಬಿಜೆಪಿ

ಮಂಗಳವಾರ, 1 ಏಪ್ರಿಲ್ 2014 (15:59 IST)
PTI
ಲೋಕಸಭೆಯ ಚುನಾವಣೆಯ ನಂತರ ಎಡಪಕ್ಷಗಳು ಜಾತ್ಯಾತೀತ ಬದ್ಧತೆಯನ್ನು ಸಾಬೀತುಪಡಿಸಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎನ್ನುವ ಕಾಂಗ್ರೆಸ್ ಮುಖಂಡ ಎ.ಕೆ.ಆಂಟನಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಎಡಪಕ್ಷದ ನಾಯಕ ಕಾರಟ್, ಬಿಜೆಪಿಯನ್ನು ಹಣಿಯಲು ಪರ್ಯಾಯವಾಗಿ ಕಾಂಗ್ರೆಸ್ಸೇತರ ಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕಾಗಿದೆ ಎಂದು ಹೇಳಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲನುಭವಿಸಲಿದೆ. ಬಿಜೆಪಿಯನ್ನು ಹಣಿಯುವಲ್ಲಿ ಕೂಡಾ ಕಾಂಗ್ರೆಸ್ ವಿಫಲವಾಗಿದೆ. ಕಾಂಗ್ರೆಸ್ಸೇತರ ಮೈತ್ರಿಕೂಟ ಮಾತ್ರ ಬಿಜೆಪಿಗೆ ಪರಿಹಾರ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ತಿಳಿಸಿದ್ದಾರೆ.

ಲೋಕಸಭೆಯ ಚುನಾವಣೆಯ ನಂತರ ಎಡಪಕ್ಷಗಳು ಜಾತ್ಯಾತೀತ ಬದ್ಧತೆಯನ್ನು ಸಾಬೀತುಪಡಿಸಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಒಂದು ವೇಳೆ ಬೆಂಬಲ ನೀಡಲು ಸಿದ್ದವಾದಲ್ಲಿ ಸ್ವೀಕರಿಸಲು ನಾವು ಸಿದ್ದರಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ರಕ್ಷಣಾ ಸಚಿವ ಎ.ಕೆ.ಆಂಟನಿ ಹೇಳಿಕೆ ನೀಡಿದ್ದರು.

ಆಂಟನಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮತ್ತೊಬ್ಬ ಸಿಪಿಐ(ಎಂ) ನಾಯಕ ಪಿನಾರಯಿ ವಿಜಯನ್, ಪ್ರಮುಖ ಪ್ರಶ್ನೆಯೆಂದರೆ, ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಸರಕಾರ ರಚಿಸಲು ಎರಡಂಕಿಯ ಗಡಿದಾಡುವ ಬಗ್ಗೆ ಸಂಶಯವಿದೆ ಎಂದು ಲೇವಡಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ