ಬಿಜೆಪಿ ಟಿಕೆಟ್ ನೀಡದಿದ್ದರೆ ಸ್ವತಂತ್ರ ಸ್ಪರ್ಧೆ: ಹೈಕಮಾಂಡ್‌ಗೆ ಜಸ್ವಂತ್ ಸಿಂಗ್ ವಾರ್ನಿಂಗ್

ಗುರುವಾರ, 20 ಮಾರ್ಚ್ 2014 (17:44 IST)
PTI
ಬಿಜೆಪಿ ಪಕ್ಷ ಬಾರ್ಮರ್‌ನಿಂದ ಟಿಕೆಟ್ ನೀಡದಿದ್ದರೆ ತಾನು ಸ್ವತಂತ್ರವಾಗಿ ಕಣಕ್ಕಿಳಿಯುತ್ತೇನೆ ಎಂದು ಬಿಜೆಪಿ ಹಿರಿಯ ನಾಯಕ ಜಸ್ವಂತ್ ಸಿಂಗ್ ಪಕ್ಷದ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದಾರೆ.

ಬಾರ್ಮರ್ ಲೋಕಸಭೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿರ್ಧಾರ ಪ್ರಕಟಿಸುವಲ್ಲಿ ಪಕ್ಷದ ಹೈಕಮಾಂಡ್ ವಿಳಂಬ ಮಾಡುತ್ತಿರುವುದಕ್ಕೆ ಸಿಂಗ್ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ.

ಪಕ್ಷದ ಆಂತರಿಕ ಮೂಲಗಳ ಪ್ರಕಾರ ಬಿಜೆಪಿಯ ಅನುಭವಿ ನಾಯಕ ಮುಂಬರುವ 2014 ರ ಲೋಕಸಭಾ ಚುನಾವಣೆಯಲ್ಲಿ ಬಾರ್ಮರ್ ಕ್ಷೇತ್ರದಿಂದ ಕಣಕ್ಕಿಳಿಯಲು ಉತ್ಸುಕರಾಗಿದ್ದಾರೆ. ಆದರೆ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ ತನ್ನ ಆಪ್ತರಾದ ಕರ್ನಲ್ ಸೋನಾ ರಾಮ್ ಅವರಿಗೆ ಅಲ್ಲಿಂದ ಟಿಕೆಟ್ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ದಾರ್ಜಿಲಿಂಗ್ ಕ್ಷೇತ್ರದಿಂದ ಸ್ಪರ್ಧಿಸುತ್ತ ಬಂದಿರುವ ಜಸ್ವಂತ್ ಸಿಂಗ್, ಈ ಹಿಂದೆಯೇ ತನ್ನ ತವರು ಜಿಲ್ಲೆಯಾದ ಬಾರ್ಮರ್‌ನಿಂದ ಕಣಕ್ಕಿಳಿಯುವ ಆಸೆಯನ್ನು ವ್ಯಕ್ತಪಡಿಸಿದ್ದರು.

"ದಾರ್ಜಿಲಿಂಗ್‌ನಿಂದ ಸ್ಪರ್ಧಿಸುವುದು ಸಂತೋಷದ ವಿಚಾರವೇ, ಆದರೆ ಇದು ನನ್ನ ಕೊನೆಯ ಎಲೆಕ್ಸನ್ ಆಗಬಹುದು. ಆದ್ದರಿಂದ ನಾನು ನನ್ನ ತವರಿಗೆ ಹಿಂತಿರುಗ ಬಯಸುತ್ತೇನೆ" ಎಂದು ಅವರು ಇತ್ತೀಚಿಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.

ಬಿಜೆಪಿಯ ಕೇಂದ್ರ ನಾಯಕತ್ವ ಬಾರ್ಮರ್ ಸ್ಥಾನದ ಮೇಲಿನ ಬಿಕ್ಕಟ್ಟನ್ನು ಸರಿಪಡಿಸಲು ಪ್ರಯತ್ನಿಸುತ್ತಿದೆ ಆದರೆ ಇನ್ನೂ ಏನನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಪಕ್ಷದ ಹೈಕಮಾಂಡ್ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ