ಬಿಜೆಪಿ ನಾಯಕರ ಭಿನ್ನಾಭಿಪ್ರಾಯ: ಪ್ರಣಾಳಿಕೆ ಬಿಡುಗಡೆಗೆ ಮೀನಾಮೇಷ

ಗುರುವಾರ, 3 ಏಪ್ರಿಲ್ 2014 (18:35 IST)
ನಾಲ್ಕು ದಿನಗಳಲ್ಲಿ ಭಾರತ ತನ್ನ ಮುಂದಿನ ಸರ್ಕಾರ ರಚಿಸಲು ಮತದಾನವನ್ನು ಮಾಡ ಹೊರಟಿವೆ, ಆದರೆ ಬಹುತೇಕ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿರುವ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಇನ್ನೂ ಬಿಡುಗಡೆ ಮಾಡಿಲ್ಲ.
PTI

ಈ ವಾರದ ಪ್ರಾರಂಭದಲ್ಲಿ ಬಂದ ವರದಿಗಳು ಬಿಜೆಪಿಯ ಅಜೆಂಡಾ ಗುರುವಾರ ಅನಾವರಣಗೊಳ್ಳಲಿದೆ ಎಂದು ಹೇಳಿದ್ದವು. ಆದರೆ ಬರುವ ಶನಿವಾರಕ್ಕೆ ಮೊದಲು ಪ್ರಣಾಳಿಕೆ ಹೊರಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಂದರೆ ಮತದಾರರು ತಮ್ಮ ಮತಗಳನ್ನು ಚಲಾಯಿಸುವ ಎರಡು ದಿನಗಳ ಮೊದಲು ಪ್ರಣಾಳಿಕೆ ಪ್ರಕಟವಾಗಲಿದೆ.

ಕೆಲವು ರಾಜಕೀಯ ವೀಕ್ಷಕರ ಪ್ರಕಾರ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನೇತೃತ್ವದ ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳಿಂದಾಗಿ ಅಜೆಂಡಾ ಬಿಡುಗಡೆ ಮಾಡಲು ವಿಳಂಬವಾಗುತ್ತಿದೆ.

64 ವರ್ಷದ ಗುಜರಾತ್ ಮುಖ್ಯಮಂತ್ರಿ ಮೋದಿ ದೇಶದ ಉನ್ನತ ಹುದ್ದೆಯ ರೇಸ್‌ನಲ್ಲಿ ಅಗ್ರಗಣ್ಯರಾಗಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತವೆ.

"ತಮಗೆ ಉನ್ನತ ಆಡಳಿತಾತ್ಮಕ ಮತ್ತು ನಿರ್ವಹಣಾ ಅರ್ಹತೆಗಳಿವೆ ಎಂದು ಹೇಳಿಕೊಳ್ಳುವ ಪಕ್ಷ ಮತ್ತು ಅದರ ನಾಯಕ ಸಮಯಕ್ಕೆ ಸರಿಯಾಗಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲು ವಿಫಲರಾಗಿದ್ದಾರೆ" ಎಂದು ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಟ್ವಿಟ್ ಮೂಲಕ ವ್ಯಂಗ್ಯವಾಡಿದ್ದಾರೆ.

9 ಹಂತದ ಚುನಾವಣೆ ಎಪ್ರೀಲ್ 7 ರಂದು ಪ್ರಾರಂಭವಾಗಿ ಮೇ 12 ರಂದು ಕೊನೆಗೊಳ್ಳಲಿದ್ದು, ಮೇ 16 ರಂದು ಮತ ಎಣಿಕೆ ಪ್ರಾರಂಭವಾಗಲಿದೆ.

"ವಿಳಂಬಕ್ಕೆ ಮುಖ್ಯ ಕಾರಣ ಪ್ರಣಾಳಿಕೆ ರಚನಾ ಸಮಿತಿಯ ಭಾಗವಾಗಿರುವ ಪ್ರತಿಯೊಬ್ಬ ಹಿರಿಯ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಚಾರ ನಿರತರಾಗಿದ್ದಾರೆ. ಆದ್ದರಿಂದ ಅವರಿಗೆ ಡಾಕ್ಯುಮೆಂಟ್ ರಚನೆಗೆ ಸಮಯವನ್ನು ವಿನಿಯೋಗಿಸುವುದು ಕಷ್ಟವಾಗುತ್ತಿದೆ" ಎಂದು ಬಿಜೆಪಿಯ ನಾಯಕರೊಬ್ಬರು ಗುರುವಾರ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ