ಬಿಜೆಪಿ ಪ್ರಣಾಳಿಕೆ: ಅಭಿವೃದ್ಧಿ, ಉತ್ತಮ ಆಡಳಿತ ಮತ್ತು 'ರಾಮ ಮಂದಿರ ನಿರ್ಮಾಣದ ಗುರಿ'

ಸೋಮವಾರ, 7 ಏಪ್ರಿಲ್ 2014 (14:50 IST)
ಪ್ರಧಾನಿ ಹುದ್ದೆಯ ಓಟದಲ್ಲಿ ಅಗ್ರಗಣ್ಯರಾಗಿರುವ ನರೇಂದ್ರ ಮೋದಿ , ಇಂದು ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ಭರವಸೆಯನ್ನು ಒತ್ತಿ ಹೇಳುವ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ತುಂಬಾ ತಡವಾಗಿ ಜಾರಿಯಾಗಿರುವ ಪ್ರಣಾಳಿಕೆ, ಉತ್ತರ ಪ್ರದೇಶದ ವಿವಾದಿತ ಮಸೀದಿ ಜಾಗದಲ್ಲಿ ಹಿಂದೂ ದೇವಾಲಯವನ್ನು ಪುನರ್ ನಿರ್ಮಿಸುವ ವಾಗ್ದಾನವನ್ನು ಸಹ ಮುಖ್ಯ ಕಾರ್ಯಸೂಚಿಯಲ್ಲಿ ಪ್ರಸ್ತಾಪ ಮಾಡಿದೆ.
PTI

"ಈ ಪ್ರಣಾಳಿಕೆ ಕೇವಲ ಔಪಚಾರಿಕತೆ ಅಲ್ಲ, ಇದು ನಮ್ಮ ಗುರಿ. ಉತ್ತಮ ಆಡಳಿತ ಮತ್ತು ಅಭಿವೃದ್ಧಿ ನಮ್ಮ ಪ್ರಮುಖ ಅಜೆಂಡಾ," ಎಂದು ಮೋದಿ ಹೇಳಿದರು. ನನಗಾಗಿ ನಾನು ಏನನ್ನು ಮಾಡುವುದಿಲ್ಲ ಮತ್ತು ಕೆಟ್ಟ ಉದ್ದೇಶದಿಂದ ಏನನ್ನೂ ಮಾಡುವುದಿಲ್ಲ" ಎಂದು ಮೋದಿ ಹೇಳಿದ್ದಾರೆ.

52 ಪುಟಗಳ ಪ್ರಣಾಳಿಕೆ, ಬಿಜೆಪಿ ಜಾಗತಿಕ ಸೂಪರ್ ರ್ಮಾರ್ಕೆಟ್‌ಗಳನ್ನು ಹೊರತು ಪಡಿಸಿ, ಎಲ್ಲಾ ಕ್ಷೇತ್ರಗಳಲ್ಲಿ ಉದ್ಯೋಗಗಳು ಹೆಚ್ಚಿಸಲು ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಪ್ರಸ್ತಾಪಿಸಿದೆ. ಅಲ್ಲದೇ ಸರಳೀಕೃತ ತೆರಿಗೆ, ಪ್ರತಿ ಕುಟುಂಬಕ್ಕೆ ಅಲ್ಪ ವೆಚ್ಚದಲ್ಲಿ ಮನೆ ಮತ್ತು ಹೊಸ ರಾಷ್ಟ್ರೀಯ ಆರೋಗ್ಯ ನೀತಿಯ ಭರವಸೆ ನೀಡಿದೆ.

ಡಿಸೆಂಬರ್ 1992 ರಲ್ಲಿ ಹಿಂದೂ ಕಾರ್ಯಕರ್ತರಿಂದ ನೆಲಸಮಗೊಂಡ 16 ನೇ ಶತಮಾನದ ಬಾಬ್ರಿ ಮಸೀದಿಯ ಸ್ಥಳದಲ್ಲಿ ರಾಮಮಂದಿರ ಕಟ್ಟಡವನ್ನು ಸಾಂವಿಧಾನಿಕ ಚೌಕಟ್ಟಿನಲ್ಲಿ ನಿರ್ಮಿಸಲಾಗುವುದು ಎಂದು ಅಜೆಂಡಾದಲ್ಲಿ ಹೇಳಲಾಗಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370 ವಿಧಿಯನ್ನು ರದ್ದುಗೊಳಿಸುವುದು, ಮತ್ತು "ಲಿಂಗ ಸಮಾನತೆ "ಗಾಗಿ ಯೂನಿಫಾರ್ಮ್ ಸಿವಿಲ್ ಕೋಡ್ ಕರಡು ಪ್ರತಿಯನ್ನು ನಿರ್ಮಿಸುವ ಭರವಸೆ ನೀಡಲಾಗಿದೆ.

ಪ್ರಸ್ತುತ ಎದುರಾಗುತ್ತಿರುವ ಸವಾಲುಗಳಿಗೆ ಪೂರಕವಾಗಿ ಭಾರತದ ಪರಮಾಣು ಸಿದ್ಧಾಂತವನ್ನು ಪರಿಷ್ಕರಿಸುವುದಾಗಿ ಪಕ್ಷ ಹೇಳಿದೆ.

ರಾಮಮಂದಿರ ವಿಷಯ ನಮಗೆ ಸಾಂಸ್ಕೃತಿಕವಾಗಿ ಬಹುಮುಖ್ಯವಾದುದು" ಹಿಂದುತ್ವ ಪ್ರತಿಪಾದನೆ ನಮ್ಮ ಕಾರ್ಯಸೂಚಿಯಲ್ಲಿ ಇಲ್ಲ ಎಂದ ಹಿರಿಯ ಬಿಜೆಪಿ ನಾಯಕ ಮುರಳಿ ಮನೋಹರ್ ಜೋಷಿ ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ