ಮತ ಸಮೀಕ್ಷೆಗಳು ಮನೋರಂಜನೆಯ ವಸ್ತುಗಳಾಗಿವೆ: ನಿತೀಶ್ ಕುಮಾರ್

ಶುಕ್ರವಾರ, 24 ಜನವರಿ 2014 (13:53 IST)
PTI
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಹಾರ್ ರಾಜ್ಯದಲ್ಲಿ ಬಿಜೆಪಿ 40 ಕ್ಷೇತ್ರಗಳಲ್ಲಿ ಜಯಗಳಿಸಲಿದ್ದು, ಅಧಿಕಾರರೂಢ ಜೆಡಿಯು ಪಕ್ಷ ಕಡಿಮೆ ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎನ್ನುವ ಸಮೀಕ್ಷಾ ವರದಿಗಳು ಮನೋರಂಜಕ ವಸ್ತುಗಳಾಗಿವೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಲೇವಡಿ ಮಾಡಿದ್ದಾರೆ.

ಸಮೀಕ್ಷಾ ತಂಡಗಳು ಕೇವಲ 200-400 ಜನರ ಅಭಿಪ್ರಾಯವನ್ನು ಪಡೆದು ವರದಿಗಳನ್ನು ಪ್ರಕಟಿಸುತ್ತಿರುವುದು ಅಧಿಕೃತವಲ್ಲ.ಟೆಲಿವಿಜನ್ ಚಾನೆಲ್‌ಗಳನ್ನು ಆಧರಿಸಿ ಸಮೀಕ್ಷಾ ವರದಿಗಳನ್ನು ಬಹಿರಂಗಪಡಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇಂತಹ ಸಮೀಕ್ಷಾ ವರದಿಗಳು ಕೇವಲ ಮನೋರಂಜನೆಯ ವಸ್ತುಗಳಾಗಿವೆ. ಬಿಜೆಪಿ ಪಕ್ಷದ ನಾಯಕರು ಇಂತಹ ವರದಿಗಳಿಂದ ಉತ್ಸಾಹಿತಗೊಂಡು ಜೆಡಿಯು ಪಕ್ಷವನ್ನು ಟೀಕಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಬಿಹಾರಿ ರಾಜ್ಯದಲ್ಲಿ 40 ಲೋಕಸಭಾ ಕ್ಷೇತ್ರಗಳಿವೆ, ಪ್ರಸ್ತುತ ಜೆಡಿಯು 20, ಬಿಜೆಪಿ 13, ಕಾಂಗ್ರೆಸ್ 2 ಮತ್ತು ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್‌ಜೆಡಿ 3 ಸ್ಥಾನಗಳನ್ನು ಹೊಂದಿದೆ.

ವೆಬ್ದುನಿಯಾವನ್ನು ಓದಿ