ಮೋದಿಯವರ ಪೋಸ್ಟರ್‌ಗಳನ್ನು ಕಿತ್ತೆಸೆದ ಪ್ರತಿಸ್ಪರ್ಧಿ ಮಧುಸೂದನ್ ಮಿಸ್ತ್ರಿ ಬಂಧನ

ಗುರುವಾರ, 3 ಏಪ್ರಿಲ್ 2014 (16:08 IST)
ವಡೋದರಾದಲ್ಲಿ ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿದಿರುವ ಕಾಂಗ್ರೆಸ್ಸಿಗ ಮಧುಸೂದನ್ ಮಿಸ್ತ್ರಿಯನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಭಿತ್ತಿಪತ್ರಗಳನ್ನು ಕಿತ್ತು ಹಾಕಿದ ಆರೋಪದ ಮೇಲೆ ಬೆಂಬಲಿಗರ ಸಮೇತ ಪೊಲೀಸರು ಬಂಧಿಸಿದ್ದಾರೆ.
PTI

ನರೇಂದ್ರ ಮೋದಿ ಪೋಸ್ಟರ್‌ಗಳನ್ನು ಕಿತ್ತು ಹಾಕಿ ಆ ಜಾಗದಲ್ಲಿ ಮಿಸ್ತ್ರಿಯ ಭಾವಚಿತ್ರವನ್ನು ಲಗತ್ತಿಸಲು ಕಾಂಗ್ರೆಸ್ ಕಾರ್ಯಕರ್ತರ ಗುಂಪು ಪ್ರಯತ್ನಿಸಿತ್ತು.

ಮೋದಿ ಉತ್ತರ ಪ್ರದೇಶದ ವಾರಣಾಸಿ ಮತ್ತು ಗುಜರಾತಿನ ವಡೋದರಾದಿಂದ ಸಂಸತ್ ಪ್ರವೇಶಿಸಲು ಅಪೇಕ್ಷಿಸಿದ್ದಾರೆ.ಇದು ಅವರಿಗೆ ಮೊದಲ ರಾಷ್ಟ್ರೀಯ ಚುನಾವಣೆಯಾಗಿದ್ದು ಪ್ರಸ್ತುತ ಅವರು ಗುಜರಾತ್ ರಾಜ್ಯ ಶಾಸಕಾಂಗದ ಸದಸ್ಯರಾಗಿದ್ದಾರೆ.

ವಾರಣಾಸಿಯಲ್ಲಿ 63 ವರ್ಷ ವಯಸ್ಸಿನ ಮೋದಿ ವಿರುದ್ಧ ಯಾರನ್ನು ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.

69 ವರ್ಷ ವಯಸ್ಸಿನ ಮಿಸ್ತ್ರಿ,ಸಂಸತ್ ಸದಸ್ಯರಾಗಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದು, ಪಕ್ಷದ ಯುವ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಹತ್ತಿರದವರೆಂದು ಪರಿಗಣಿಸಲಾಗಿದೆ.

ವೆಬ್ದುನಿಯಾವನ್ನು ಓದಿ