ಮೋದಿಯನ್ನು ಪ್ರಧಾನಿಯಾಗಲು ಯಾವತ್ತೂ ಬಿಡುವುದಿಲ್ಲ: ಗುಡುಗಿದ ಮುಲಾಯಂ

ಮಂಗಳವಾರ, 1 ಏಪ್ರಿಲ್ 2014 (15:40 IST)
PTI
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯನ್ನು ಪ್ರಧಾನಿಯಾಗಲು ಯಾವತ್ತೂ ಬಿಡುವುದಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಗುಡುಗಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಹುಮತ ಪಡೆದು ಮೋದಿಗೆ ಪ್ರಧಾನಿ ಪಟ್ಟ ನೀಡಬೇಕು ಎನ್ನುವ ಬಿಜೆಪಿ ಬಯಕೆಯನ್ನು ಈಡೇರಿಸಲು ಬಿಡುವುದಿಲ್ಲ. ಒಂದು ವೇಳೆ ಉತ್ತರಪ್ರದೇಶದಲ್ಲಿ ಹೆಚ್ಚಿನ ಕ್ಷೇತ್ರದಲ್ಲಿ ಜಯಗಳಿಸುವಲ್ಲಿ ವಿಫಲವಾದಲ್ಲಿ ಮೋದಿ ಯಾವತ್ತೂ ಪ್ರಧಾನಿಯಾಗುವುದಿಲ್ಲ ಎಂದರು.

ಮುಸ್ಲಿಂ ಸಮುದಾಯಕ್ಕೆ ಸೌಲಭ್ಯಗಳನ್ನು ಒದಗಿಸಿಕೊಡುವ ಕುರಿತಂತೆ ಬಿಜೆಪಿ ಮತ್ತು ಬಿಎಸ್‌ಪಿ ಪಕ್ಷಗಳು ಒಂದು ನಾಣ್ಯದ ಎರಡು ಮುಖಗಳು. ಕಾಂಗ್ರೆಸ್‌ನ ಪಾತ್ರ ಕೂಡಾ ಸಂಶಯಾತ್ಮಕವಾಗಿದೆ ಎಂದು ತಿಳಿಸಿದ್ದಾರೆ.

ರಿಯಾಜ್ ಅಹ್ಮದ್ ನೇತೃತ್ವದ ಸುನ್ನಿ ಉಲೇಮಾ ಕೌನ್ಸಿಲ್‌ನ ಪ್ರತಿನಿದಿಗಳು ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಪಕ್ಷಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದೆ.

ದೇಶದ ಸಂವಿಧಾನ ಉಳಿಸಲು ಮತ್ತು ಜಾತ್ಯಾತೀತ ಬದ್ದತೆಯನ್ನು ಸಂರಕ್ಷಿಸಲು ಬಾಬರಿ ಮಸೀದಿಯನ್ನು ಬಿಜೆಪಿಯಿಂದ ಉಳಿಸಿದ್ದೇನೆ. ಮುಸ್ಲಿಂ ಸಮುದಾಯಕ್ಕೆ ಧಕ್ಕೆಯಾದಾಗ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಿದ್ದೇನೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ