ಮೋದಿಯನ್ನು ಭೇಟಿಯಾಗಲಿರುವ ಸುಪರ್‌ಸ್ಟಾರ್ ನಾಗಾರ್ಜುನ

ಸೋಮವಾರ, 24 ಮಾರ್ಚ್ 2014 (15:44 IST)
ದಕ್ಷಿಣದ ಸ್ಟಾರ್ ನಾಗಾರ್ಜುನ ಅವರು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳ ಮಧ್ಯೆ ಇಂದು ಅವರು ಅಹಮದಾಬಾದನಲ್ಲಿ ನರೇಂದ್ರ ಮೋದಿಯನ್ನು ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ.
PTI

ಬಿಜೆಪಿಯ ಪ್ರಧಾನಿ ಅಭ್ಯರ್ಥಿಯನ್ನು ಭೇಟಿಯಾಗುತ್ತಿರುವ ದಕ್ಷಿಣದ ಎರಡನೇ ಚಲನಚಿತ್ರ ನಟ ಇವರಾಗಿದ್ದು ಈ ಮೊದಲು ನಟ ಮತ್ತು ಕೇಂದ್ರ ಸಚಿವ ಚಿರಂಜೀವಿ ಸಹೋದರ ಪವನ್ ಕಲ್ಯಾಣ್ ಮೋದಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ರಾಷ್ಟ್ರೀಯ ಚುನಾವಣೆಗೆ ಕೇವಲ ಎರಡು ವಾರಗಳಿದ್ದು, ಸಾಧ್ಯವಾದಷ್ಟು ಸ್ನೇಹಿತರನ್ನು ಮತ್ತು ಮೈತ್ರಿಕೂಟಗಳನ್ನು ಸೆಳೆದುಕೊಳ್ಳುವ ಉದ್ದೇಶದಿಂದ ಬಿಜೆಪಿ ಈ ಭೇಟಿಗಳನ್ನು ನಡೆಸುತ್ತಿದೆ ಎಂದು ವೇದ್ಯವಾಗುತ್ತಿದೆ.

ನಾಗಾರ್ಜುನ ಮತ್ತು ಪವನ್ ಕಲ್ಯಾಣ ಇಬರಿಬ್ಬರೂ ಸಹ ಆಂಧ್ರಪ್ರದೇಶದವರಾಗಿದ್ದಾರೆ.

ಮೂಲಗಳ ಪ್ರಕಾರ ನಾಗಾರ್ಜುನ ತಮ್ಮ ಪತ್ನಿ ಮಾಜಿ ನಟಿ ಅಮಲಾರವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಬಯಸುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಅವರು ಈ ಮೊದಲು ಅವರು ನ ಬಿಜೆಪಿ ನಾಯಕ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿದ್ದರು ಎಂದು ವರದಿಯಾಗಿದೆ.

ವೆಬ್ದುನಿಯಾವನ್ನು ಓದಿ