ಯಾವುದೇ ಪರಿಸ್ಥಿತಿಯಲ್ಲೂ ಬಿಜೆಪಿ ಜತೆ ಮೈತ್ರಿ ಇಲ್ಲ: ನವೀನ್ ಪಟ್ನಾಯಕ್ ಘೋಷಣೆ

ಮಂಗಳವಾರ, 8 ಏಪ್ರಿಲ್ 2014 (18:04 IST)
ತನ್ನ ಪಕ್ಷದ ಸದಸ್ಯರು ಗಣಿ ಹಗರಣದಲ್ಲಿ ಸಿಲುಕ್ಕಿದ್ದರೂ ತಾನು ಶುದ್ಧ ಹಸ್ತ ಎಂದು ಗುರುತಿಸಿಕೊಂಡಿರುವ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಬಿಜೆಡಿಗೆ ಬಿಜೆಪಿ ಎಂದೂ ಕೂಡ ಪರ್ಯಾಯ ಆಯ್ಕೆಯಾಗಲಾರದು ಎಂದು ತಿಳಿಸಿದ್ದಾರೆ.
PTI

"ರಾಜ್ಯದಲ್ಲಿ ನಡೆದಿರುವ ಚುನಾವಣೆ ಸಿದ್ಧತೆಗಳಿಂದ ನಾವು ಬಹಳ ಸಂತೋಷಗೊಂಡಿದ್ದೇವೆ. ನಾವು ರಾಜ್ಯದಲ್ಲಿ ಬಹಳ ಶುದ್ಧ ಮತ್ತು ಪಾರದರ್ಶಕತೆಯ ಸರಕಾರವನ್ನು ನೀಡುತ್ತೇವೆ ಮತ್ತು ಕೇಂದ್ರಕ್ಕೆ ಅನೇಕ ಸಂಸದರನ್ನು ಕಳಿಸುತ್ತೇವೆ. ನಮ್ಮ ರಾಜ್ಯದಲ್ಲಿ ಮೋದಿಯ ಅಲೆಯಿಲ್ಲ. ಅದನ್ನು ನಾವು ಚುನಾವಣೆಯಲ್ಲಿ ಸಾಬೀತು ಪಡಿಸುತ್ತೇವೆ" ಎಂದು ನವೀನ್ ಪಟ್ನಾಯಕ್ ಹೇಳಿದ್ದಾರೆ.

"ಕಾಂಗ್ರೆಸ್ ನೇತೃತ್ವದ ಯುಪಿಎ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಸಮಾನ ಅಂತರವನ್ನು ಕಾಯ್ದುಕೊಂಡಿರುವ ಒಡಿಶಾದ ಮುಖ್ಯಮಂತ್ರಿ, "ನಾವು ಬಿಜೆಪಿ ಮತ್ತು ಕಾಂಗ್ರಸ್ಸಿಂದ ಸಮಾನ ದೂರದಲ್ಲಿದ್ದೇವೆ. ಎನ್‌ಡಿಎ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂಬುದನ್ನು ನಿರಾಕರಿಸಿದರೂ ನಾವು ಅವರ ಜತೆ ಮೈತ್ರಿ ಮಾಡಿಕೊಳ್ಳಲಾರೆವು " ಎಂದು ಸ್ಪಷ್ಟ ಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ