' ರಾಹುಲ್ ಗಾಂಧಿ ಅಮೇಥಿಯ ಜನರಿಗೆ ಸವಾಲಾಗಿದ್ದಾರೆ, ನನಗಲ್ಲ: ಸೃತಿ ಇರಾನಿ

ಸೋಮವಾರ, 7 ಏಪ್ರಿಲ್ 2014 (17:40 IST)
ಅಮೇಥಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಿರುತೆರೆ ನಟಿ, ರಾಜಕಾರಣಿ ಸ್ಮೃತಿ ಇರಾನಿ, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿ ರಾಹುಲ್ ಅಮೇಥಿಗೆ ಸವಾಲಾಗಿದ್ದಾರೆಯೇ ಹೊರತು ನನಗಲ್ಲ ಎಂದು ಗುಡುಗಿದರು.
PTI

ಬಿಜೆಪಿ ಪ್ರಬಲ ಅಭ್ಯರ್ಥಿಯೆಂದು ಬಿಂಬಿಸಲಾದ ಸ್ಮೃತಿ ಇರಾನಿ ಇಂದು ಮೊದಲ ಬಾರಿಗೆ ಅಮೇಥಿಗೆ ಭೇಟಿ ನೀಡಿ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ.

"ರಾಹುಲ್ ನನಗೆ ಸವಾಲು ಎಂದು ನಾನು ಪರಿಗಣಿಸುವುದಿಲ್ಲ. ಅವರು ಸ್ವತಃ ಅಮೇಥಿಯ ಜನರಿಗೆ ಒಂದು ಪ್ರಮುಖ ಸವಾಲಾಗಿ ಬಿಟ್ಟಿದ್ದಾರೆ" ಎಂದು ಸೃತಿ ಹೇಳಿದ್ದಾರೆ. ಒಂಬತ್ತು ಹಂತದ ಸಾರ್ವತ್ರಿಕ ಚುನಾವಣೆಯ ಉಪಾಂತ್ಯದಲ್ಲಿ ಮೇ 7 ರಂದು ಇಲ್ಲಿ ಚುನಾವಣೆ ನಡೆಯಲಿದೆ.

38 ವರ್ಷದ ಬಿಜೆಪಿ ನಾಯಕಿಯ ಪ್ರವೇಶದೊಂದಿಗೆ ಅಮೇಥಿಯಲ್ಲಿ ಚುನಾವಣೆ ತ್ರಿಕೋನ ಸ್ಪರ್ಧೆಗೆ ತಿರುಗಿದೆ. ಆಮ್ ಆದ್ಮಿ ಪಕ್ಷದಿಂದ ಕವಿ ಪರಿವರ್ತಿತ ರಾಜಕಾರಣಿ ಕುಮಾರ್ ವಿಶ್ವಾಸ್ ಇಲ್ಲಿಂದ ಕಣಕ್ಕಿಳಿಯುತ್ತಿದ್ದಾರೆ.

"ನಾನು ಕೇವಲ ಕಾಂಗ್ರೆಸ್ ವಿರುದ್ಧ ಕಣಕ್ಕಿಳಿಯುತ್ತಿದ್ದೇನೆ ಹೊರತು ಆಪ್ ನೇತೃತ್ವದ ಕಾಂಗ್ರೆಸ್ 'ಬಿ ತಂಡದ ವಿರುದ್ಧವಲ್ಲ. ಪೊರಕೆ(ಆಪ್), ಕೈ (ಕಾಂಗ್ರೆಸ್) ಯಿಂದ ಹಿಡಿಯಲ್ಪಟ್ಟಿದೆ ಎಂಬುದಕ್ಕೆ ಕೈ ಮತ್ತು ಪೊರಕೆ ಜತೆಯಾಗಿ ದೆಹಲಿಯಲ್ಲಿ ಸರಕಾರ ನಡೆಸಿರುವುದು ಉದಾಹರಣೆಯಾಗಿದೆ" ಎಂದು ಹೇಳುವುದರ ಮೂಲಕ ತಮಗೆ ವಿಶ್ವಾಸ್ ಪ್ರಬಲ ಎದುರಾಳಿ ಎಂಬುದನ್ನು ಅಲ್ಲಗೆಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ