ರಾಹುಲ್ ಮಗು, ಆದ್ದರಿಂದ ಮಿಠಾಯಿಯ ಬಗ್ಗೆ ಚರ್ಚೆ ಮಾಡುತ್ತಾರೆ - ಮೋದಿ

ಮಂಗಳವಾರ, 15 ಏಪ್ರಿಲ್ 2014 (12:20 IST)
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೇಲೆ ಪ್ರತಿದಾಳಿ ನಡೆಸಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಮೋದಿ "ರಾಹುಲ್ ಮಗು. ಹಾಗಾಗಿ ಅವರು ಮಿಠಾಯಿಯ ಕುರಿತು ಮಾತನಾಡುತ್ತಾರೆ" ಎಂದು ಟೀಕಿಸಿದ್ದಾರೆ.
PTI

15 ರಾಜ್ಯಗಳಲ್ಲಿ, 100 ಸ್ಥಳಗಳಲ್ಲಿ ತ್ರಿಡಿ ಸಮಾವೇಶ ನಡೆಸಿದ ಮೋದಿ, "ರಾಹುಲ್ ವಯಸ್ಸನ್ನು ಪರಿಗಣಿಸಬೇಡಿ. ಅವರು ಮಾನಸಿಕವಾಗಿ ಪ್ರೌಢರಾಗಿಲ್ಲ. ಆದ್ದರಿಂದ ಮಿಠಾಯಿ ಬಗ್ಗೆ ಮಾತನಾಡುತ್ತಿರುತ್ತಾರೆ".

"ಮಾನಸಿಕವಾಗಿ ರಾಹುಲ್ ಇನ್ನೂ ಮಗುವಂತೆ. ಅವರು ಪ್ರೌಢರಾಗಿದ್ದರೆ, ಗುಜರಾತ್ ಸರ್ಕಾರದ ಮುನ್ನೂರು ಮಾಡೆಲ್‌ಗಳಿಗೆ ಸಂಯುಕ್ತ ರಾಷ್ಟ್ರ ಸಂಘ ಮತ್ತು ಭಾರತ ಸರ್ಕಾರ ಪ್ರಶಸ್ತಿ ನೀಡಿರುವ ವಿಷಯ ಅವರಿಗೆ ತಿಳಿದಿರುತ್ತಿತ್ತು" ಎಂದು ಮೂದಲಿಸಿದ್ದಾರೆ.

ಇತ್ತೀಚಿಗೆ ಮಹಾರಾಷ್ಟ್ರದ ಮರಾಠಾವಾಡಾದಲ್ಲಿ ಪ್ರಚಾರ ಸಭೆಯನ್ನು ನಡೆಸುತ್ತ ಮಾತನಾಡುತ್ತಿದ್ದ ರಾಹುಲ್ ಗಾಂಧಿ ಗುಜರಾತಿನ ಅಭಿವೃದ್ಧಿ ಮಾದರಿಯನ್ನು 'ಮಿಠಾಯಿ ಮಾದರಿ' ಎಂದು ಕರೆದಿದ್ದರು. ನಮೋ ಅಭಿವೃದ್ಧಿ ಮಾದರಿಯನ್ನು ಜಾರಿಗೆ ತರುವ ಮೂಲಕ ಕೇವಲ ಒಬ್ಬ ವ್ಯಕ್ತಿಗೆ ಲಾಭ ಸಿಗುವಂತೆ ಮಾಡಿದ್ದಾರೆ ಎಂದು ಅವರು ಹೇಳಿದ್ದರು.

ವೆಬ್ದುನಿಯಾವನ್ನು ಓದಿ