ವಾಟ್ಸಪ್ ನಲ್ಲಿ ಹರಿದಾಡುತ್ತಿದೆ ಮಕ್ಕಳ ಬೆನ್ನ ಮೇಲೆ ಬಿಜೆಪಿ ನಾಯಕನ ವಾಕಿಂಗ್

ಸೋಮವಾರ, 24 ಮಾರ್ಚ್ 2014 (13:22 IST)
ಬಿಜೆಪಿ ಅಭ್ಯರ್ಥಿಯೊಬ್ಬರು ಮಕ್ಕಳ ಬೆನ್ನ ಮೇಲೆ ನಡೆದ ಪ್ರಸಂಗ ಗುಜರಾತ್‌ನಲ್ಲಿ ನಡೆದಿದೆ. ಯೋಗ ಶಿಬಿರವೊಂದರಲ್ಲಿ ಅವರು ಮಕ್ಕಳ ಬೆನ್ನನ್ನು ಹತ್ತಿ ನಡೆಯುತ್ತಿರುವುದನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ.
PTI

ಬಿಜೆಪಿಯ ರಾಜ್‍ಕೋಟ್‌ನ ಅಭ್ಯರ್ಥಿ, ಮೋಹನ್ ಕುಂದರಿಯಾ ಶಾಲಾ ವಿದ್ಯಾರ್ಥಿಗಳ ಬೆನ್ನಿನ ಮೇಲೆ ವಾಕಿಂಗ್ ನಡೆಸುತ್ತಿರುವುದನ್ನು ತೋರಿಸುವ ಒಂದು ವಿಡಿಯೋ, ವಾಟ್ಸಪ್‌ನಲ್ಲಿ ಓಡಾಡುತ್ತಿದೆ.

ರಾಜ್‍ಕೋಟ್‌ನ ಸ್ವಾಮಿನಾರಾಯಣ ದೇವಸ್ಥಾನದಲ್ಲಿ ನಡೆದ ಯೋಗಶಿಬಿರದಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದ್ದು, ಚಿತ್ರದಲ್ಲಿ ಕುಂದರಿಯಾ ನಗುತ್ತ ಮಕ್ಕಳ ಬೆನ್ನಿನ ಮೇಲೆ ನಡೆದಾಡುತ್ತಿದ್ದಾರೆ. ತಮ್ಮ ಕೃತ್ಯಕ್ಕೆ ಪ್ರತಿಕ್ರಿಯಿಸಿರುವ ಅವರು "ನಾನು ನನ್ನ ಶಕ್ತಿಯನ್ನು ತೋರಿಸುತ್ತೇನೆ ಎಂದು ಮಕ್ಕಳಿಗೆ ಹೇಳಿದ್ದ ಮಾತಿಗೆ ಬದ್ಧನಾಗಿ ಈ ರೀತಿ ನಡೆದುಕೊಂಡೆ" ಎಂದು ಹೇಳಿದ್ದಾರೆ.

"ನಾನು ಸೂಕ್ಷ್ಮತೆ ಇಲ್ಲದ ವ್ಯಕ್ತಿ ಅಲ್ಲ ಮತ್ತು ದೈಹಿಕವಾಗಿ ಯಾರಿಗೂ,ಎಂದಿಗೂ ನೋವನ್ನು ಕೊಟ್ಟಿಲ್ಲ . ವಿದ್ಯಾರ್ಥಿಗಳು ಯೋಗದ ಮೂಲಕ ತಮ್ಮ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಪ್ರದರ್ಶಿಸಿ ಎಂದು ಒತ್ತಾಯಿಸಿದರು. ಅವರ ಬೇಡಿಕೆಯಂತೆ ನಾನು ಮಕ್ಕಳ ಗುಂಪಿನ ಮೇಲೆ ನಡೆಯ ಬೇಕಾಯಿತು ಎಂದು ಹೇಳಿಕೆ ನೀಡುವುದರ ಮೂಲಕ ಕುಂದರಿಯಾ ತಮ್ಮ ಕೃತ್ಯವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾರೆ" .

ಬಿಜೆಪಿ ನಾಯಕನ ಈ ವರ್ತನೆಗೆ ಸಾಮಾಜಿಕ ಮಾಧ್ಯಮದಲ್ಲಿ ಕಟು ಟೀಕೆ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ