ವಿಪಕ್ಷಗಳ ಟೀಕೆಗಳಿಂದ ಮೋದಿ ಮತ್ತಷ್ಟು ಬಲಿಷ್ಠರಾಗುತ್ತಿದ್ದಾರೆ: ರಾಜನಾಥ್ ಸಿಂಗ್

ಸೋಮವಾರ, 7 ಏಪ್ರಿಲ್ 2014 (18:51 IST)
ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಯನ್ನು ಕೊಂಡಾಡುತ್ತ ಮಾತನಾಡಿರುವ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್, ನಮ್ಮ ದೇಶದ ಯಾವ ಮುಖ್ಯಮಂತ್ರಿಯೂ ಮೋದಿಯಷ್ಟು ದಾಳಿಯನ್ನು ಎದುರಿಸಿಲ್ಲ. ಆದರೆ ಪ್ರತಿ ದಾಳಿಯ ನಂತರ ಮೋದಿ ಹೆಚ್ಚು ಪ್ರಕಾಶಿಸುತ್ತಿದ್ದಾರೆ ಎಂದು ಹೇಳಿದರು.
PTI

ಬಿಜೆಪಿಯ ಮಹೇಶ್ ಶರ್ಮಾ ಪರ ಸಿಕಿಂದ್ರಾಬಾದಿನ ಝಾಜ್ಜರ್, ಕ್ಷೇತ್ರದಲ್ಲಿ ಮತಗಳನ್ನು ಯಾಚಿಸುತ್ತಿದ್ದ ರಾಜನಾಥ್ ಸಿಂಗ್ ಮೋದಿ ಕಳೆದ 12 ವರ್ಷಗಳಲ್ಲಿ ಹಲವಾರು ಬಾರಿ ಕಠಿಣ ಸಂದರ್ಭಗಳನ್ನು ಎದುರಿಸಿದರು ಆದರೆ ಅವರು ಯಾವಾಗಲೂ ಜನರ ನಿರೀಕ್ಷೆಗಳನ್ನು ಪೂರೈಸಲು ಪ್ರಯತ್ನಿಸಿದ್ದಾರೆ. ಅವರ ನಾಯಕತ್ವ ದೇಶವನ್ನು ಬಲಿಷ್ಠಗೊಳಿಸಲಿದೆ ಮತ್ತು ಆಂತರಿಕ ಮತ್ತು ಬಾಹ್ಯ ಸ್ಥಿರತೆಯನ್ನು ಖಚಿತಪಡಿಸಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

"ದೇಶದ ದರಿದ್ರ ಸ್ಥಿತಿಗೆ ಮತ್ತು ನಿಧಾನಗತಿಯ ಆರ್ಥಿಕ ಬೆಳವಣಿಗೆಗೆ ಕಾಂಗ್ರೆಸ್ ಸರ್ಕಾರವನ್ನು ನೇರ ಹೊಣೆಗಾರರನ್ನಾಗಿಸಿದ ಅವರು ಕಾಂಗ್ರಸ್ ಹಣದುಬ್ಬರ ಮತ್ತು ಭ್ರಷ್ಟಾಚಾರವನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ" ಎಂದು ಗುಡುಗಿದ್ದಾರೆ.

"ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ದೇಶಕ್ಕೆ ಯಾವ ಕೊಡುಗೆ ನೀಡಿದೆ. ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲು ಚುನಾವಣೆಗೆ ಸ್ಪರ್ಧಿಸುತ್ತಿವೆ ಎಂದು ಲೇವಡಿ ಮಾಡಿದರು.

ರೈತರಿಗೆ ಮತ್ತು ಯುವಕರಿಗೆ ಭರವಸೆ ನೀಡಿದ ಅವರು, ಕ್ಷೇತ್ರ ಬೆಳೆ ವಿಮೆಯನ್ನು ಜಾರಿಯಲ್ಲಿ ತರುವ ಯೋಜನೆಯನ್ನು ಬಿಜೆಪಿ ಹೊಂದಿದೆ. ರೈತರು ಯಾವುದೇ ನೈಸರ್ಗಿಕ ವಿಕೋಪವನ್ನು ಎದುರಿಸಬೇಕಾದಾಗ ಇದು ಸಹಾಯಕವಾಗಲಿದೆ.ಉದ್ಯಮಶೀಲತೆಗಾಗಿ ತರಬೇತಿ ಯನ್ನು ಆಯೋಜಿಸುವುದಾಗಿ ಯುವಕರಿಗೆ ರಾಜನಾಥ್ ವಾಗ್ದಾನ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ