ಸಾಮಾಜಿಕ ಜಾಲ ತಾಣದಲ್ಲಿ ಹರಿಯ ಬಿಡಲಾಗುತ್ತಿದೆ ಗುಜರಾತ ದಂಗೆಯ ದೃಶ್ಯಾವಳಿ

ಗುರುವಾರ, 20 ಮಾರ್ಚ್ 2014 (17:46 IST)
ಸಾರ್ವತ್ರಿಕ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು ಪಕ್ಷಗಳಲ್ಲಿ ಚಡಪಡಿಕೆ ಹೆಚ್ಚಾಗುತ್ತಿದೆ. ಹೇಗಾದರೂ ಮಾಡಿ ಗೆಲುವನ್ನು ಪಡೆಯಬೇಕು ಎಂಬ ಹವಣಿಕೆಯಲ್ಲಿರುವ ಪಕ್ಷದವರು ತಾವು ಎದುರಾಳಿಗಳ ಯಾವ ಬಲಹೀನತೆಯನ್ನು ಮುಂದಿಟ್ಟುಕೊಂಡು, ಯಾವುದನ್ನು ಅವಲಂಬಿಸಿಕೊಂಡು ಮುನ್ನಡೆಯುತ್ತಿದ್ದೇವೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ವಿರೋಧಿಗಳನ್ನು ಜನಸಾಮಾನ್ಯರ ದೃಷ್ಟಿಯಲ್ಲಿ ಕೆಳಗಿಳಿಸುವುದಷ್ಟೇ ಎಲ್ಲ ಪಕ್ಷಗಳ ಪರಮೋಚ್ಚ ಗುರಿಯಾಗಿಬಿಟ್ಟಿದೆ.
PTI

ಹಿಂದುಗಳ ಧರ್ಮಕ್ಷೇತ್ರ ವಾರಣಾಸಿಯಲ್ಲಿ ಈಗ ನಡೆಯುತ್ತಿರುವುದು ಕೂಡ ಇದೇ. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಇದೇ ಕ್ಷೇತ್ರದಿಂದ ತಮ್ಮ ಅದೃಷ್ಟ ಪರೀಕ್ಷೆಗೆ ಹೊರಟಿದ್ದು ಅವರನ್ನು ತುಚ್ಛಿಕರಿಸಲು ವಾರಣಾಸಿ ಪ್ರಾಂತ್ಯದಲ್ಲಿ ಗುಜರಾತ್ ಗಲಭೆಗೆ ಸಂಬಂಧಿಸಿದಂತಹ ವಿಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಯ ಬಿಡಲಾಗುತ್ತಿದೆ.

‘ಎಂಡ್ ರಾಯಿಟರ್ಸ್’ ಎಂಬ ಶಿರೋನಾಮೆ ಉಳ್ಳ ಈ ವೀಡಿಯೊವನ್ನು ಎಸ್.ಎಂ. ಸೈಯದ್ ಮೊಹಮ್ಮದ್ ಸಂಪಾದಿಸಿದಿದ್ದಾರೆ. ವೀಡಿಯೊನಲ್ಲಿ ಗುಜರಾತ್ ಗಲಭೆಯ ಸಂದರ್ಭದಲ್ಲಿ ನಡೆದ ವಿಧ್ವಂಸಕ ಕೃತ್ಯ, ಗುಂಡಾಗಿರಿ, ಸುಟ್ಟ ಶವಗಳನ್ನು ಮತ್ತು ಗಲಭೆಸಂತ್ರಸ್ತರನ್ನು ತೋರಿಸಲಾಗಿದೆ.

ಇದರಲ್ಲಿ ಆರ್‌ಎಸ್‌ಎಸ್ ನಾಯಕರನ್ನು ಮತ್ತು ಮೋದಿಯನ್ನು ಧರ್ಮದ ಪ್ರತಿನಿಧಿಗಳೆಂದು ಸಂಬೋಧಿಸಲಾಗಿದೆ.ವೀಡಿಯೊದಲ್ಲಿನ ಪ್ರತಿಯೊಂದು ದೃಶ್ಯಗಳನ್ನು ಒಂದೊಂದಾಗಿ ತೋರಿಸಲಾಗಿದೆ. ಹಿನ್ನೆಲೆಯಲ್ಲಿ "ನಾವು ಗುಜರಾತ್ ದೃಶ್ಯ ನೋಡಿದ್ದೇವೆ "ಎಂಬ ಧ್ವನಿ ಪ್ರತಿಧ್ವನಿಸುತ್ತಿದೆ.

ವೆಬ್ದುನಿಯಾವನ್ನು ಓದಿ