ಸಾಹಿತಿಗಳಿಗೆ ಬೇಕಿತ್ತಾ ಈ ರಾಜಕೀಯ ?

ಸೋಮವಾರ, 7 ಏಪ್ರಿಲ್ 2014 (14:45 IST)
- ಅರುಣಕುಮಾರ ಧುತ್ತರಗಿ.
PR

ಬೆಂಗಳೂರು: ರಾಜ್ಯದ ರಾಜಕಾಣದಲ್ಲಿ ಸಾಹಿತಿಗಳು ಕೂಡ ಭಾಗವಹಿಸುತ್ತಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳು ಕೆಲವು ಪಕ್ಷದ ಪರ ಮತ್ತು ವಿರೋಧದ ಮಾತುಗಳನ್ನು ಆಡುತ್ತಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಪಡೆದ ಯು.ಆರ್.ಅನಂತಮೂರ್ತೀ ಮತ್ತು ಗಿರೀಶ ಕಾರ್ನಾಡ ಮೋದಿಯ ವಿರುದ್ದ ಹರಿಯಾಯ್ದು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ.

" ಒಂದು ವೇಳೆ ಮೋದಿ ಪ್ರಧಾನ ಮಂತ್ರಿ ಆದರೆ ಭಾರತಿಯ ಸೌಂಸ್ಕೃತಿ ಮತ್ತು ಇದರ ಭಾವೈಕ್ಯತೆಯನ್ನು ಹಾಳುಮಾಡುತ್ತಾರೆ " ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಅನಂತಮೂರ್ತೀ ತಿಳಿಸಿದ್ದಾರೆ. ' ಬಿಜೆಪಿ ಮೋದಿಯನ್ನು ಎದುರು ಇಟ್ಟುಕೊಂಡು ಮೀಚುತ್ತಿದ್ದಾರೆ , ಇದರ ಹೊರತು ಈ ಪಕ್ಷದಲ್ಲಿ ಭ್ರಷ್ಟರೇ ಹೆಚ್ಚಿಗೆ ತುಂಬಿದ್ದಾರೆ ಎಂದು ಗಿರೀಶ ಕಾರ್ನಾಡ ತಿಳಿಸಿದ್ದಾರೆ.

ಈ ಇಬ್ಬರೂ ಸಾಹಿತಿಗಳು ಬಿಜೆಪಿ ಮತ್ತು ಸಂಘಪರಿವಾರವನ್ನು ವಿರೋಧಿಸುತ್ತಿದ್ದಾರೆ. ಈ ಸಾಹಿತಿಗಳ ಹೇಳಿಕೆ ರಾಜಕೀಯ ವಲುಯದಲ್ಲಿ ಸಂಚಲನ ಮೂಡಿಸಿದೆ. ಆದರೆ ಬಿಜೆಪಿ ಮಾತ್ರ ಈ ಸಾಹಿತಿಗಳನ್ನು ವಿರೋಧೀಸುತ್ತಿದ್ದಾರೆ.

ಮಾಜಿ ಮುಖ್ಯ ಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಮಾತ್ರ ಈ ಸಾಹಿತಿಗಳ ಮೇಲೆ ಹರಿ ಹಾಯಿದಿದ್ದಾರೆ. ಇವರೆಲ್ಲರು ನಕ್ಸಲ್‌‌ವಾದವನ್ನು ಸಮರ್ಥಿಸುವ ಸಾಹಿತಿಗಳು ಎಂದು ಹೇಳಿಕೆ ನೀಡಿದ್ದಾರೆ.

ಈ ಹಿಂದೆ ಅನಂತ ಮೂರ್ತೀ ಹೇಳಿದ ಒಂದು ಮಾತು ಕೂಡ ವಿವಾದಕ್ಕೆ ಈಡುಮಾಡಿತ್ತು . ಅಷ್ಟಕ್ಕು ಅನಂತಮೂರ್ತಿ ಹೇಳಿದ್ದೇನೆಂದರೆ , ಒಂದುವೇಳೆ ಮೋದಿ ಪ್ರಧಾನಿಯಾದರೆ ನಾನು ಈ ದೇಶದಲ್ಲಿ ಇರುವುದಿಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇವರ ಜೊತೆಗೆ ವಸುಂಧರಾ ಭೂಪತಿ , ಕೆ. ಮರುಳಸಿದ್ದಪ್ಪಾ ಮತ್ತು ಜಿಕೆ ಗೊವಿಂದ ರಾವ ಕುಡ ಅನಂತಮೂರ್ತೀ ಮತ್ತು ಕಾರ್ನಾಡ ಜೊತೆಗೂಡಿ ಬಿಜೆಪಿ ವಿರೋಧಿಯಾಗಿ ಮಾತನಾಡುತ್ತಿದ್ದಾರೆ.

ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಈ ಸಾಹಿತಿಗಳ ಹೇಳಿಕೆಗಳನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಇದೆಲ್ಲವನ್ನು ನೋಡಿದಾಗ ನಮಗೆ ಅನಿಸುವುದೇನೆಂದರೆ ಈ ಪ್ರಗತಿ ಪರ ಮತ್ತು ಬುದ್ದಿಜೀವಿಗಳಿಗೆ ಬೇಕಾಗಿತ್ತಾ ಈ ಹೊಲಸು ರಾಜಕೀಯ ? ಎಂಬ ಪ್ರಶ್ನೆ ಜನರ ಮನಸಿನಲ್ಲಿ ಈ ಪ್ರಶ್ನೇ ಮುಡುತ್ತಿದ್ದೆ.

ದೇಶದಲ್ಲಿ ಸಾಕಷ್ಟು ಸಮಸ್ಯೆಗಳು ಇವೆ , ಇದರ ಬಗ್ಗೆ ಧನಿ ಎತ್ತದ ಸಾಹಿತಿಗಳು ಈಗ ಒಂದು ಪಕ್ಷದ ಪರ ವಹಿಸಿ ಮಾತನಾಡುವುದು ಎಷ್ಟು ಸರಿ ಎಂದು ಜನರ ಅಭಿಪ್ರಾಯವಾಗಿದೆ.

ಇವರೆಲ್ಲರು ಕಾಂಗ್ರೆಸ್‌ ಪರ ಮಾತನಾಡುವುದನ್ನು ನೋಡಿದರೆ , ಇವರಿಗೆ ಜ್ಞಾನಪೀಠ ಪ್ರಶಸ್ತಿ ಕಾಂಗ್ರೆಸಿಗರೇ ನಿಡಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇಲ್ಲಿಯವರೇಗೆ ಎಷ್ಟೋ ಭ್ರಷ್ಟಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ , ಈ ಸಂಧರ್ಭದಲ್ಲಿ ಸಾಹಿತಿಗಳು ತುಟಿ ಬಿಚ್ಚಿರಲಿಲ್ಲ . ಕನ್ನಡ್ಡಕ್ಕಾಗಿ ಮತ್ತು ಕನ್ನಡ ಶಾಲೆಗಳ ಬಗ್ಗೆ ಕೆಲವರನ್ನು ಬಿಟ್ಟು ಇವರು ಎಂದು ಚಕಾರವೆತ್ತಿಲ್ಲ. ತಮ್ಮ ತಮ್ಮ ಮೌಲ್ಯ ಉಳಿಸುಕೊಳ್ಳಲು ವಿಫಲರಾಗುತ್ತಿದ್ದಾರೆ ಎಂದನಿಸುತ್ತಿದೆ.

ಕಾದಂಬರಿ , ಕಾವ್ಯ , ನಾಟಕಗಳನ್ನು ಬರೆದು ಕನ್ನಡವನ್ನು ಉಳಿಸಿ ಬೆಳಸಿದವರಿಗೆ ಈ ಹೊಲಸು ರಾಜಕೀಯ ನಿಜಕ್ಕೂ ಬೇಕಾ ? ನೀವೆ ಹೇಳಿ ?

ಇನ್ನು ಕೆಲ ಸಾಹಿತಿಗಳು ಬಿಜೆಪಿ ಪರರವಹಿಸಿ ಮಾತನಾಡಿದ್ದಾರೆ . ಮೊನ್ನೆ ತಾನೆ ಒಂದು ಖಾಸಗಿ ಚಾನೆಲ್‌‌ನಲ್ಲಿ ಚಿದಾನಂದ ಮೂರ್ತಿ ಬಿಜೆಪಿ ಪರ ವಹಿಸಿ ಮಾತನಾಡಿದ್ದಾರೆ. ಇವರೀಗೂ ಬೇಕಿತ್ತಾ ಈ ರಾಜಕೀಯ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಕಾಂಗ್ರೆಸ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿ ಭ್ರಷ್ಟಾವಾರದ ಆರೋಪ ಹೊತ್ತ ಸಾಕಷ್ಟು ನಾಯಕರಿದ್ದಾರೆ.
ಇವರ ಹೊಲಸು ಹೂರಣ ಹೊರ ಬಂದಾಗ ಈ ಸಾಹಿತಿಗಳು ಧ್ವನಿ ಎತ್ತಿರಲಿಲ್ಲ. 2ಜಿ ಹಗರಣದಿಂದ ಹಿಡಿದು ಗಣಿ ಹರಣದವರೆಗೆ ಕೆಲವು ನಾಯಕರ ಭ್ರಷ್ಟಾಚಾರ ಹೊರಗೆ ಬಂದಿದೆ .ಈ ವಿಷಯ ಈ ಕನ್ನಡ ಸಾಹಿತಿಗಳ ಗಮನಕ್ಕೆ ಬರಲಿಲ್ಲವೆ. ಖಡ್ಗಕ್ಕಿಂತ ಹರಿತವಾದದ್ದು ಈ ಲೇಖನಿ ಎನ್ನುವ ಹಾಗೆ ಈ ಸಾಹಿತಿಗಳು ಪತ್ರಿಕೆಯಲ್ಲಿ ಇದರ ಕುರಿತು ಬರೆಯಬಹುದಾಗಿತ್ತು, ಆದರೆ ಇದೆಲ್ಲನ್ನು ಬೀಟ್ಟು ಈ ಪ್ರಚಾರಕ್ಕೋ ಅಥವಾ ನಿಜವಾಗಿಯೂ ದೇಶದ ಉದ್ದಾರಕ್ಕೋ ಇವರು ರಾಜಕಿಯ ಪಕ್ಷದ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ.

ಇದಷ್ಟೆ ಅಲ್ಲ ಇವರು ಕಾಂಗ್ರೆಸ ಪರ ಮಾತನಾಡುವುದನ್ನು ನೋಡಿದರೆ ಇವರೆಷ್ಟು ದುಡ್ಡು ಪಡೆದಿದ್ದಾರೆ ಎನ್ನೂವ ಸಂಶಯ ವ್ಯಕ್ತವಾಗುತ್ತಿದೆ. ಅಷ್ಟಕ್ಕು ಇವರು ಎಷ್ಟು ಹಣ ಪಡೆದಿದ್ದಾರೆ ಎನ್ನುವದು ಮಾತ್ರ ಗಾಳಿ ಮಾತಾಗಿದೆ ಅಷ್ಟೆ .

ಇದೆಲ್ಲವನ್ನು ನೋಡಿದರೆ ಜನರಂತು ಈ ಸಾಹಿತಿಗಳ ಬಗ್ಗೆ ಪರ ಮತ್ತು ವಿರೋಧದ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ಜನರ ಮಧ್ಯೆ ಇರುವ ಗಾಳಿ ಮಾತಿನಿಂದ ಸಾಹಿತಿಗಳ ರಾಜಕಾರಣವನ್ನುಯ ವಿರೋಧಿಸುತ್ತಿದ್ದಾರೆ.

ಇದರಲ್ಲಿ ನಿಜ ಎಷ್ಟೋ ? ಸುಳ್ಳು ಎಷ್ಟೋ ? ಎನ್ನುವುದು ದೇವರಿಗೆ ಗೊತ್ತು ? ಆದರೆ ಕಟ್ಟ ಕಡೆಯ ಪ್ರಶ್ನೇ ಎನೆಂದರೆ , ಅಷ್ಟಕ್ಕು ಸಾಹಿತಿಗಳಿಗೆ ಬೇಕಿತ್ತಾ ಈ ರಾಜಕಾರಣ ?

- ಅರುಣಕುಮಾರ ಧುತ್ತರಗಿ.

ವೆಬ್ದುನಿಯಾವನ್ನು ಓದಿ