ಸೋನಿಯಾ ಗಾಂಧಿ ವಿರುದ್ಧ ಉಮಾಭಾರತಿ ಸ್ಪರ್ಧಿಸಲಿ: ಬಾಬಾ ರಾಮದೇವ್

ಗುರುವಾರ, 27 ಮಾರ್ಚ್ 2014 (18:05 IST)
PTI
ಬಿಜೆಪಿ ನಾಯಕಿ ಫೈರ್ ಬ್ರಾಂಡ್ ಖ್ಯಾತಿಯ ಉಮಾಭಾರತಿ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಲು ಉತ್ಸಕರಾಗಿದ್ದಾರೆ ಎಂದು ಯೋಗಾ ಗುರು ಬಾಬಾ ರಾಮದೇವ್ ಹೇಳಿದ್ದಾರೆ.

54 ವರ್ಷ ವಯಸ್ಸಿನ ಉಮಾಭಾರತಿಯನ್ನು ಉತ್ತರಪ್ರದೇಶದ ಝಾನ್ಸಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಆದರೆ, ಉಮಾಭಾರತಿಯವರನ್ನು ಸೋನಿಯಾ ವಿರುದ್ಧ ಕಣಕ್ಕಿಳಿಸುವಂತೆ ಬಿಜೆಪಿ ಹೈಕಮಾಂಡ್‌ಗೆ ರಾಮದೇವ್ ಲಾಭ ಮಾಡುತ್ತಿದ್ದಾರೆ.

ಉಮಾಭಾರತಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರನ್ನು ಸೋಲಿಸಿದ್ದರಿಂದ ಸೋನಿಯಾ ವಿರುದ್ಧ ಸ್ಪರ್ಧಿಸುವ ಎಲ್ಲಾ ಅರ್ಹತೆ ಅವರಿಗಿದೆ. ಒಂದು ವೇಳೆ ಉಮಾಭಾರತಿಯವರನ್ನು ಸೋನಿಯಾ ವಿರುದ್ಧ ಕಣಕ್ಕಿಳಿಸಿದಲ್ಲಿ ನಾನು ಅವರ ಪರ ಪ್ರಚಾರ ಮಾಡುತ್ತೇನೆ ಎಂದು ಸವಾಲ್ ಹಾಕಿದ್ದಾರೆ.

ಬಿಜೆಪಿ ಹೈಕಮಾಂಡ್‌ ಉತ್ತಮ ಅಭ್ಯರ್ಥಿಗಳ ಬಗ್ಗೆ ಸಲಹೆ ಕೇಳಿದಲ್ಲಿ ಮಾತ್ರ ನಾನು ಮಾಹಿತಿ ನೀಡುತ್ತೇನೆ. ಬಿಜೆಪಿ ನಾಯಕಿ ಉಮಾಭಾರತಿ ಪರ ಲಾಬಿ ಮಾಡುತ್ತಿದ್ದೇನೆ ಎನ್ನುವುದು ತಪ್ಪು ತಿಳುವಳಿಕೆ ಎಂದು ಯೋಗಾ ಗುರು ಬಾಬಾ ರಾಮದೇವ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ