ಹರ್ಯಾಣಾದಲ್ಲಿ ಅರವಿಂದೇ ಕೇಜ್ರಿವಾಲ್ ರೋಡ್‌ ಶೋ: ಪ್ರತಿಭಟನೆ

ಶನಿವಾರ, 22 ಮಾರ್ಚ್ 2014 (15:57 IST)
PTI
ಹರ್ಯಾಣದ ಫರೀದಾಬಾದ್‌ನಲ್ಲಿ ರೋಡ್ ಶೋ ಮಾಡುತ್ತಿರುವ ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವರಿಗೆ ಸ್ಥಳೀಯರು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ.

ಆಪ್ ಅಭ್ಯರ್ಥಿ ಪುರುಷೋತ್ತಮ್ ಡಗರ್ ಜತೆಗೆ ಕೇಜ್ರಿವಾಲ್ ಸೆಕ್ಟರ್ 37 ಮಾರ್ಕೆಟ್‌ನಿಂದ ರೋಡ್ ಶೋ ಆರಂಭಿಸಿದ್ದಾರೆ. ಕೇಜ್ರಿವಾಲ್ ತಮ್ಮ ಬೆಂಬಲಿಗರೊಂದಿಗೆ ಫರೀದಾಬಾದ್‌ಗೆ ತಲುಪಿದಾಗ, ಅಲ್ಲಿನ ಸ್ಥಳೀಯರು ಕಪ್ಪು ಧ್ವಜ ಪ್ರದರ್ಶಿಸಿ ಆಪ್ ವಿರುದ್ಧ ಘೋಷಣೆ ಕೂಗಿದ್ದಾರೆ.

ಕೇಜ್ರಿವಾಲ್ ಅವರಿಗೆ ಕಪ್ಪು ಧ್ವಜ ಪ್ರದರ್ಶಿಸುವುದು ನಮ್ಮ ದೇಶದಲ್ಲಿ ಹೊಸತೇನೂ ಅಲ್ಲ. ನಮ್ಮ ವಿರೋಧಿ ಪಕ್ಷಗಳಿಗೂ ಕಪ್ಪು ಬಾವುಟ ತೋರಿಸುತ್ತಾರೆ. ಕೇಜ್ರಿವಾಲ್ ಮಾತ್ರ ನಮ್ಮ ದೇಶವನ್ನು ಮುನ್ನಡೆಸಬಲ್ಲರು ಎಂದು ಆಪ್ ಬೆಂಬಲಿಗರು ಹೇಳಿದ್ದಾರೆ.

ಇಂದು ಫರೀದಾಬಾದ್ ಮತ್ತು ಗುರ್‌ಗಾಂವ್‌ನ ವಿವಿಧ ಪ್ರದೇಶಗಳಲ್ಲಿ ಕೇಜ್ರಿವಾಲ್‌ರ ರೋಡ್ ಶೋ ನಡೆಯಲಿದ್ದು, ಭಾನುವಾರ ಮಧ್ಯಾಹ್ನದ ವರೆಗೆ ಇದು ಮುಂದುವರಿಯಲಿದೆ.

ವೆಬ್ದುನಿಯಾವನ್ನು ಓದಿ