ನಮ್ಮಪ್ಪನಾಣೆಗೂ ನರೇಂದ್ರ ಮೋದಿ ಪ್ರಧಾನಿಯಾಗಲ್ಲ: ಲಾಲು ಪ್ರಸಾದ್ ಯಾದವ್

ಶನಿವಾರ, 22 ಮಾರ್ಚ್ 2014 (19:08 IST)
PTI
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ರಥಯಾತ್ರೆ ಹೊರಟಿದ್ದ ಆಡ್ವಾಣಿಯವರನ್ನು ಬಂಧಿಸಿದ್ದು, ನಾನೇ. ನರೇಂದ್ರ ಮೋದಿ ಪ್ರಧಾನಿ ಸ್ಥಾನ ಅಲಂಕರಿಸಬಾರದು ಎಂದು ಜನತೆಗೆ ಮನವಿ ಮಾಡುವುದಾಗಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

ಕೋಮುವಾದಿ ಶಕ್ತಿಗಳನ್ನು ದೆಹಲಿಯ ಗದ್ದುಗೆಯ ಮೇಲೆ ಕೂರಲು ನಾವು ಬಿಡುವುದಿಲ್ಲ. ಬಾರತ ದೇಶದಲ್ಲಿ ವಿಭಿನ್ನ ಧರ್ಮದವರು ವಾಸಿಸುತ್ತಾರೆ.ಒಂದು ವೇಳೆ ನರೇಂದ್ರ ಮೋದಿ ಪ್ರಧಾನಿಯಾದಲ್ಲಿ ದೇಶ ವಿಭಜನೆಯಾಗಲಿದೆ. ಆದ್ದರಿಂದ ಮೋದಿ ಪ್ರಧಾನಿಯಾಗಲು ಅವಕಾಶ ನೀಡಬಾರದು ಎಂದರು.

ಲಾಲು ಪ್ರಸಾದ್ ಯಾದವ್ ದುರ್ಬಲರಲ್ಲ. ನನ್ನ ಕೈಗಳು ಜೆಸಿಬಿ ಮಷಿನ್‌ನಂತೆ ತುಂಬಾ ದೊಡ್ಡದಾಗಿವೆ. ಕೋಮುಶಕ್ತಿಗಳು ಕೇಂದ್ರದಲ್ಲಿ ಅಧಿಕಾರಕ್ಕೆ ಬಾರದಂತೆ ತಡೆಯುತ್ತವೆ ಎಂದು ಗುಡುಗಿದರು.

ಕಾಂಗ್ರೆಸ್‌ನೊಂದಿಗಿನ ಮೈತ್ರಿಯ ಬಗ್ಗೆ ಲೋಕಜನ ಶಕ್ತಿ ಪಕ್ಷದ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್‌ಗೆ ತಾಳ್ಮೆಯಿಂದಿರುವಂತೆ ಸಲಹೆ ನೀಡಿದ್ದೆ. ಆದರೆ, ಅವರು ತಾಳ್ಮೆ ಕಳೆದುಕೊಂಡರು. ಮತ್ತು ಎಂದೆಂದಿಗೂ ತಾಳ್ಮೆ ಕಳೆದುಕೊಂಡವರಂತಾದರು ಎಂದು ಲೇವಡಿ ಮಾಡಿದರು.

ರಾಷ್ಟ್ರೀಯ ಜನತಾ ದಳದ ಅಭ್ಯರ್ಥಿಗಳಾದ ಎಂ.ಎ.ಎ. ಫಾತ್ಮಿ, ಮಧುಬನಿ ಅಭ್ಯರ್ಥಿ ಅಬ್ದುಲ್ ಬರಿ ಸಿದ್ದಿಕಿ ಮತ್ತು ಸಮಷ್ಠಿಪುರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರಾಮ್ ಅವರಿಗೆ ಮತ ನೀಡುವಂತೆ ಕೇಂದ್ರದ ಮಾಜಿ ರೈಲ್ವೆ ಸಚಿವ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕೋರಿದ್ದಾರೆ.

ವೆಬ್ದುನಿಯಾವನ್ನು ಓದಿ