ಸೋನಿಯಾ ಗಾಂಧಿ ಎಷ್ಟು ಶ್ರೀಮಂತರು ಗೊತ್ತಾ? ಇಲ್ಲಿದೆ ನೋಡಿ ವಿವರ

ಬುಧವಾರ, 2 ಏಪ್ರಿಲ್ 2014 (18:00 IST)
PTI
ರಾಯಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಇಂದು ನಾಮಪತ್ರ ಸಲ್ಲಿಸಿದ ಸೋನಿಯಾ ಗಾಂಧಿ, 10 ಕೋಟಿ ರೂಪಾಯಿಗಳ ಆಸ್ತಿಯನ್ನು ಹೊಂದಿರುವುದಾಗಿ ಘೋಷಿಸಿದ್ದಾರೆ.

85 ಸಾವಿರ ರೂಪಾಯಿ ನಗದು, 66 ಲಕ್ಷ ರೂಪಾಯಿ ಬ್ಯಾಂಕ್ ಠೇವಣಿ, 11.5 ಲಕ್ಷ ರೂಪಾಯಿ ಮೌಲ್ಯದ ಸೆಕ್ಯುರಿಟಿ ಬಾಂಡ್‌ಗಳು ಮತ್ತು 85 ಲಕ್ಷ ರೂಪಾಯಿ ಮ್ಯುಚುವಲ್ ಫಂಡ್‌ನಲ್ಲಿ ತೊಡಗಿಸಿದ್ದಾರೆ.

ಪೋಸ್ಟಲ್ ಸೇವಿಂಗ್ಸ್‌‌ನಲ್ಲಿ 45 ಲಕ್ಷ ರೂಪಾಯಿಗಳಿದ್ದು, 62 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಹೊಂದಿದ್ದಾರೆ.

ಆಸಕ್ತಿಕರ ವಿಷಯವೆಂದರೆ, ತಮ್ಮ ಪುತ್ರ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ 9 ಲಕ್ಷ ರೂಪಾಯಿ ಸಾಲವನ್ನು ನೀಡಿದ್ದಾರೆ.

ಸೋನಿಯಾ ಗಾಂಧಿ ದೆಹಲಿಯ ಸುಲ್ತಾನಪುರದಲ್ಲಿ 6.5 ಕೋಟಿ ರೂಪಾಯಿ ಮೌಲ್ಯದ ಕೃಷಿ ಭೂಮಿಯನ್ನು ಹೊಂದಿದ್ದಾರೆ.

ತಮ್ಮ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿಲ್ಲ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಕಳೆದ 2009ರ ಲೋಕಸಭೆ ಚುನಾವಣೆಯಲ್ಲಿ ಭಾರತದಲ್ಲಿ ಯಾವುದೇ ಕಾರು ಅಥವಾ ಮನೆಯನ್ನು ಹೊಂದಿಲ್ಲ. ಆದರೆ, ಇಟಲಿಯಲ್ಲಿ ಹಿರಿಯರಿಂದ ಬಂದ ಮನೆಯಿದೆ ಎಂದು ತಿಳಿಸಿದ್ದಾರೆ.

ಸೋನಿಯಾ ಗಾಂಧಿ ತಾವು ಒಟ್ಟು ಸುಮಾರು 10 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿರುವುದಾಗಿ ಘೋಷಣಾ ಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.

ಕಳೆದ ಡಿಸೆಂಬರಿ ತಿಂಗಳಲ್ಲಿ ಹುಫಿಂಗ್ಟನ್‌ ಪೋಸ್ಟ್ ಎನ್ನುವ ಪತ್ರಿಕೆ, ಸೋನಿಯಾ ಗಾಂಧಿ ವಿಶ್ವದ 12ನೇ ಶ್ರೀಮಂತ ರಾಜಕಾರಣಿಯಾಗಿದ್ದಾರೆ ಎಂದು ವರದಿ ಮಾಡಿತ್ತು. ನಂತರ ತಪ್ಪು ವರದಿಗೆ ಕ್ಷಮೆ ಕೂಡಾ ಕೋರಿತ್ತು.

ವೆಬ್ದುನಿಯಾವನ್ನು ಓದಿ