ಲೋಕಸಭೆಗೆ 7ನೇ ಹಂತದ ಚುನಾವಣೆಯಲ್ಲಿ ಶೇ. 66.20 ಮತದಾನ

ಬುಧವಾರ, 30 ಏಪ್ರಿಲ್ 2014 (20:13 IST)
ನವದೆಹಲಿ: ಲೋಕಸಭೆಗೆ 7 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಿಗೆ ಇಂದು ನಡೆದ ಲೋಕಸಭೆ ಚುನಾವಣೆಯಲ್ಲಿ ಒಟ್ಟು ಒಟ್ಟು ಶೇಕಡಾವಾರು 66. 20 ಮತದಾನವಾಗಿದೆ. ಕಳೆದ ಬಾರಿ 2009ರಲ್ಲಿ ನಡೆದ ಲೋಕಸಭೆ ಚುನಾವಣೆಗಿಂತ ಈ ಬಾರಿ ಮತದಾನದ ಪ್ರಮಾಣ ಹೆಚ್ಚಾಗಿದೆ. ವಿವಿಧ ರಾಜ್ಯಗಳಲ್ಲಿ ಮತದಾರರು ಮತ ಚಲಾಯಿಸಿದ ಶೇಕಡಾವಾರು ಪ್ರಮಾಣ ಕೆಳಗಿನಂತಿದೆ.  

ಪಂಜಾಬ್ ಶೇ. 73, ತೆಲಂಗಾಣ ಶೇ. 70, ಗುಜರಾತ್ ಶೇ. 62 ಮತದಾನವಾಗಿದೆ.  ಪ.ಬಂಗಾಳ ಶೇ.  81.35, ಆಂಧ್ರ ಶೇ. 70 ಉತ್ತರ ಪ್ರದೇಶ ಶೇ. 57,ವಡೋದರಾದಲ್ಲಿ 72 ಮತದಾನವಾಗಿದೆ. ಬಿಹಾರದಲ್ಲಿ 60,   ಜಮ್ಮು ಕಾಶ್ಮೀರ 26.56, ದಾಮನ್ ದಿಯು 76 , ಉತ್ತರಪ್ರದೇಶ 57.10.

 ದಾದರ್ ನಗರಹವೇಲಿಯಲ್ಲಿ ಶೇ. 85ಕ್ಕಿಂತ ಹೆಚ್ಚು ಮತದಾನವಾಗಿದೆ.  273 ಕೋಟಿ ನಗದು, 2 ಕೋಟಿ ಲೀಟರ್ ಮದ್ಯವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಚುನಾವಣೆ ಅಧಿಕಾರಿ ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ