2014 ರ ಚುನಾವಣೆ ರಾಜನೀತಿಕರಣದ ಶುದ್ಧಿಕರಣದ ಚುನಾವಣೆಯಾಗಲಿದೆ.

ಶುಕ್ರವಾರ, 14 ಮಾರ್ಚ್ 2014 (15:31 IST)
PR
ಬಿ ಜೆ ಪಿ ಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ 2014 ರ ಚುನಾವಣೆ ರಾಜನೀತಿಕರಣದ ಶುದ್ಧಿಕರಣದ ಚುನಾವಣೆಯಾಗಲಿದೆ, ತೃತೀಯ ರಂಗವನ್ನು ಕಿತ್ತೊಗೆಯುವುದರ ಮೂಲಕ ರಾಜಕಾರಣ ಸ್ವಚ್ಛವಾಗಲಿದೆ ಎಂದು ಹೇಳಿದ್ದಾರೆ. ಓರಿಸ್ಸಾದ ರಾಜಧಾನಿ ಭುವನೇಶ್ವರದಲ್ಲಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಓರಿಸ್ಸಾದ ಭಾಷೆಯಲ್ಲಿಯೇ ಭಾಷಣವನ್ನು ಪ್ರಾರಂಭಿಸಿದ ಅವರು, ನಾನು ನಿಮ್ಮ ಮುಖ್ಯಮಂತ್ರಿಯನ್ನು ನವೀನ ಪಟ್ನಾಯಕ್ ಅವರನ್ನು ಕೀಳಾಗಿ ಕಾಣುವ ಉದ್ದೇಶದಿಂದ ಓಡಿಯಾ ದಲ್ಲಿ ಮಾತನಾಡುತ್ತಿಲ್ಲ. ನಾನು ಎಲ್ಲ ಭಾಷೆಗಳನ್ನು ಗೌರವಿಸುತ್ತೇನೆ ಎಂದು ಹೇಳಿದರು.

ನವೀನ ಪಟ್ನಾಯಕ್ ವಿರುದ್ಧ ವಾಗ್ದಾಳಿ ನಡೆಸಿದ ಅವರು ಮುಖ್ಯಮಂತ್ರಿ 14 ವರ್ಷದಿಂದ ಇಲ್ಲಿನ ಜನರ ಬದುಕನ್ನು ದುಸ್ತರಗೊಳಿಸಿದ್ದಾರೆ, ಓರಿಸ್ಸಾದಲ್ಲಿ ಕೆಲಸವಿಲ್ಲದೇ ಇಲ್ಲಿನ ಜನ ಗುಜರಾತ್ ಗೆ ವಲಸೆ ಬರುತ್ತಿದ್ದಾರೆ ಎಂದು ಹೇಳಿದರು.

ಓರಿಸ್ಸಾದಲ್ಲಿ 21 ಕಮಲಗಳು ಅರಳಬೇಕು. 6 ದಶಕಗಳಿಂದ ಕಾಂಗ್ರೆಸ್ ಮಾಡಲಾರದ್ದನ್ನು, ಬಿ ಜೆ ಪಿ ಸರಕಾರ 60 ತಿಂಗಳಲ್ಲಿ ಮಾಡಿ ತೋರಿಸುತ್ತದೆ ಎಂದು ಸಾರಿದರು.

ವೆಬ್ದುನಿಯಾವನ್ನು ಓದಿ