ಕಿಂಗ್ ಆಫ್ ಪಾಪ್ ಮೈಕೇಲ್ ಜಾಕ್ಸನ್ ಸಹಜವಾಗಿ ಸಾಯಲಿಲ್ಲ. ಅವರನ್ನು ಸಾಯಿಸಿಬಿಟ್ಟರು ಎಂದು ಜಾಕ್ಸನ್ ಮಗಳು ಪಾರಿಸ್ ಜಾಕ್ಸನ್ ಆರೋಪಿಸಿದ್ದಾರೆ. ಹದಿನೆಂಟು ವರ್ಷದ ಪಾರಿಸ್ ಸಂದರ್ಶನವೊಂದರಲ್ಲಿ ಈ ಮಾಹಿತಿಯನ್ನು ಹೊರಗಾಕಿದ್ದಾರೆ.
2009ರಲ್ಲಿ ಪ್ಲಾನ್ ಪ್ರಕಾರ ನನ್ನ ತಂದೆಯನ್ನು ಸಾಯಿಸಿದರು. ಯಾರೋ ನನ್ನನ್ನು ಸಾಯಿಸಲು ನೋಡುತ್ತಿದ್ದಾರೆಂದೂ. ಒಂದು ದಿನ ಖಚಿತವಾಗಿ ಸಾಯಿಸುತ್ತಾರೆಂದು ಡ್ಯಾಡಿ ಮೈಕೇಲ್ ತನ್ನೊಂದಿಗೆ ಹೇಳುತ್ತಿದ್ದರೆಂದು ಪಾರಿಸ್ ಹೇಳಿಕೊಂಡಿದ್ದಾಳೆ.
ಅವರು ಹತ್ಯೆಗೆ ಗುರಿಯಾದರೆಂದು ಮನೆಯವರಿಗೆ, ಅಭಿಮಾನಿಗಳಿಗೆ ಎಲ್ಲರಿಗೂ ಗೊತ್ತು. ತನ್ನ ತಂದೆಯ ಸಾವಿ ಪ್ರಕರಣದಲ್ಲಿ ನ್ಯಾಯ ಸಿಗಲಿದೆ ಎಂಬ ನಂಬಿಕೆ ಇದೆ. ಇದೊಂದು ರೀತಿ ಚದುರಂಗದಾಟದಂದಿತಿದೆ ಎಂದಿದ್ದಾರೆ ಜಾಕ್ಸನ್ ಮಗಳು ಪಾರಿಸ್.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.