ಮಹಿಳೆ ಮೇಲೆ ಗ್ಯಾಂಗ್ ರೇಪ್‌ಗೆ ಗ್ರಾಮ ಪಂಚಾಯಿತಿ ಆದೇಶ

ಮಂಗಳವಾರ, 1 ಏಪ್ರಿಲ್ 2014 (12:30 IST)
ಪಾಕಿಸ್ತಾನದ ಪಂಚಾಯಿತಿಯೊಂದು 40 ವರ್ಷ ವಯಸ್ಸಿನ ಮಹಿಳೆ ಮೇಲೆ ಗ್ಯಾಂಗ್ ರೇಪ್ ಮಾಡುವಂತೆ ಪುರುಷರಿಗೆ ಆದೇಶ ನೀಡಿದ ಅಮಾನವೀಯ ಘಟನೆ ಸಂಭವಿಸಿದೆ. ಮಹಿಳೆಯ ಸೋದರ ಗ್ರಾಮಸ್ಥನೊಬ್ಬನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆಂದು ಆರೋಪಿಸಿದ ಪಂಚಾಯಿತಿ ಅದಕ್ಕೆ ಸೇಡುತೀರಿಸಿಕೊಳ್ಳುವುದಕ್ಕಾಗಿ ಮಹಿಳೆಯ ಮೇಲೆ ಗ್ಯಾಂಗ್ ರೇಪ್ ನಡೆಸುವಂತೆ ಪಂಚಾಯಿತಿ ಆದೇಶಿಸಿತು. ಮುಜಾಫರ್‌ಗಢಕ್ಕೆ 80 ಕಿಮೀ ದೂರದ ರಾಡಿವಾಲಾದ ಪಂಚಾಯಿತಿ ಆದೇಶದ ಮೇಲೆ ವಿಚ್ಛೇದಿತ ಮಹಿಳೆಯನ್ನು ವಿವಸ್ತ್ರಗೊಳಿಸಿ, ಸುಮಾರು 9 ಜನರು ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರ ಮಾಡಿದರು.

ಈ ಘಟನೆ ನಡೆದದ್ದು ಜನವರಿ 24ರಂದು. ಅಜ್ಮಲ್ ಎಂಬ ವ್ಯಕ್ತಿ ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಗ್ರಾಮಸ್ಥನೊಬ್ಬ ಆರೋಪಿಸಿ ಪಂಚಾಯಿತಿಯಲ್ಲಿ ತೀರ್ಮಾನ ಮಾಡುವಂತೆ ಮನವಿ ಮಾಡಿದ. ಪಂಚಾಯಿತಿ ಮುಖಂಡ ಅಜ್ಮಲ್ ಸೋದರಿ ಬೀಬಿ ಎಂಬುವರ ಮೇಲೆ ಗ್ರಾಮಸ್ಥನ ಕಡೆಯ ಪುರುಷರಿಂದ ರೇಪ್ ಮಾಡುವಂತೆ ಆದೇಶಿಸಿತು. ಮಹಿಳೆಯ ಸೋದರನ ಅನೈತಿಕ ಸಂಬಂಧಕ್ಕೆ ಇತ್ಯರ್ಥ ಮಾಡುವುದು ಪಂಚಾಯಿತಿ ಉದ್ದೇಶವಾಗಿತ್ತು. ಆರೋಪಿಗಳಾದ 9 ಜನರ ಪೈಕಿ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ