ಸ್ಕರ್ಟ್ ಕೆಳಗಿನಿಂದ ಚಿತ್ರ ತೆಗೆಯುತ್ತಿದ್ದ ಏರ್ ಮಾರ್ಷಲ್ ಬಂಧನ

ಸೋಮವಾರ, 31 ಮಾರ್ಚ್ 2014 (17:38 IST)
ನಾಶ್ವಿಲ್ಲೆ, ಟೆನ್ನೀಸಿ: ನಾಶ್‌ವಿಲ್ಲೆ ಅಂತಾರಾಷ್ಟ್ರೀಯ ವಿಮಾನಿನಿಲ್ದಾಣದಲ್ಲಿ ಮಹಿಳೆಯರು ವಿಮಾನದ ಮೆಟ್ಟಿಲನ್ನು ಹತ್ತುವಾಗ ಕೆಳಗೆ ನಿಂತು ಸ್ಕರ್ಟ್ ಅಡಿಯಿಂದ ಸೆಲ್ ಫೋನ್ ಛಾಯಾಚಿತ್ರಗಳನ್ನು ತೆಗೆಯುತ್ತಿದ್ದ ಫೆಡೆರೆಲ್ ಏರ್ ಮಾರ್ಷಲ್‌ನನ್ನು ನಾಶ್ವಿಲ್ಲೆ ಪೊಲೀಸರು ಬಂಧಿಸಿದ್ದಾರೆ. ಗುರುವಾರ ಸೌತ್‌ವೆಸ್ಟ್ ಏರ್‌ಲೈನ್ ಫ್ಲೈಟ್ 3132ರಲ್ಲಿ ಕರ್ತವ್ಯನಿರತನಾಗಿದ್ದ ಅಡಾಂ ಬಾರ್ಚ್ ಮಹಿಳೆಯ ಸ್ಕರ್ಟ್ ಅಡಿಯಿಂದ ಚಿತ್ರ ತೆಗೆಯುತ್ತಿರುವುದನ್ನು ಗಮನಿಸಿದ ಪ್ರತ್ಯಕ್ಷದರ್ಶಿಯೊಬ್ಬರು ಕೂಡಲೇ ಸೆಲ್‌ಪೋನ್ ಕಸಿದುಕೊಂಡರು.

ಬಾರ್ಚ್‌ನನ್ನು ಕರ್ತವ್ಯದಿಂದ ತೆಗೆಯಲಾಗಿದ್ದು ಟಿಎಸ್‌ಎ ತನಿಖೆಯಲ್ಲಿ ನೆರವಾಗುತ್ತಿದೆ. ಬಾರ್ಚ್ ಅವರನ್ನು ಉದ್ಯೋಗದಿಂದ ತೆಗೆಯುವ ಅಥವಾ ಅಮಾನತು ಮಾಡುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಏಜೆನ್ಸಿ ತಿಳಿಸಿದೆ.

ವೆಬ್ದುನಿಯಾವನ್ನು ಓದಿ