‘ನಮ್ಮ ದೇಶದ ಭೂಭಾಗಕ್ಕೆ ಹೆಸರಿಡಲು ಚೀನಾ ಯಾರು?’

ಶುಕ್ರವಾರ, 21 ಏಪ್ರಿಲ್ 2017 (06:52 IST)
ನವದೆಹಲಿ: ಅರುಣಾಚಲ ಪ್ರದೇಶದ ಕೆಲವು ಭೂಭಾಗಳಿಗೆ ತನ್ನ ಹೆಸರಿಟ್ಟಿರುವ ಚೀನಾ ಕ್ರಮವನ್ನು ಭಾರತ ಪ್ರಬಲವಾಗಿ ಖಂಡಿಸಿದೆ. ಅಲ್ಲದೆ ತನ್ನ ಭೂಭಾಗಗಳಿಗೆ ಹೆಸರಿಡುವ ಅಧಿಕಾರ ಚೀನಾಗೆ ಕೊಟ್ಟವರಾರು ಎಂದು ಪ್ರಶ್ನಿಸಿದೆ.

 
ಅರುಣಾಚಲ ಪ್ರದೇಶದ ಆರು ಭಾಗಗಳಿಗೆ ಮರು ನಾಮಕರಣ ಮಾಡಿರುವ ಚೀನಾ ಕ್ರಮವನ್ನು ಪ್ರಶ್ನಿಸಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ‘ಅರುಣಾಚಲ ಪ್ರದೇಶದ ಅಣು ಅಣುವೂ ಭಾರತಕ್ಕೆ ಸೇರಿದ್ದು. ಇದು ನಿಮ್ಮ ನೆರೆಹೊರೆಯವರಿಗೆ ನೀವು ನಾಮಕರಣ ಮಾಡಿದಂತೆ. ನೀವು ಹೆಸರು ಬದಲಾಯಿಸಿದ ಮಾತ್ರಕ್ಕೆ ಅವರ ಮೂಲ ಹೆಸರಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ” ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮರುನಾಮಕರಣ ಮಾಡುವುದರಿಂದ ನಮ್ಮ ದೇಶದ ಭೂಭಾಗ ಬೇರೆ ದೇಶದ್ದಾಗದು ಎಂದು ವಿದೇಶಾಂಗ ಇಲಾಖೆ ಕೂಡಾ ಖಾರವಾಗಿ ಪ್ರತಿಕ್ರಿಯಿಸಿದೆ. ಇದರಿಂದ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಡಬಹುದು ಎಂದು ಭಾರತ ಎಚ್ಚರಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ