ಅತ್ಯಾಚಾರಿಗೆ ಪುರುಷತ್ವ ಹರಣ ಶಿಕ್ಷೆ ನೀಡಿದ ಕೊರಿಯಾ

ಭಾರತದಲ್ಲಿ ಅತ್ಯಾಚಾರಿಗಳ ವಿರುದ್ದ ಪುರುಷತ್ವ ಹರಣದಂತಹ ಕಠಿಣ ಕಾನೂನು ಜಾರಿಗೆ ಆಗ್ರಹಿಸುತ್ತಿರುವಾಗಲೆ ದಕ್ಷಿಣ ಕೊರಿಯಾದ ನ್ಯಾಯಾಲಯ ಇದೇ ಪ್ರಥಮ ಬಾರಿಗೆ ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪಿಯೊಬ್ಬನಿಗೆ 15 ವರ್ಷಗಳ ಜೈಲುವಾಸ ಹಾಗೂ ರಾಸಾಯನಿಕದ ಮೂಲಕ ಪುರುಷತ್ವ ಹರಣದ ಶಿಕ್ಷೆಯನ್ನು ವಿಧಿಸುವ ಮೂಲಕ ಮಕ್ಕಳ ಮೇಲಿನ ಅತ್ಯಾಚಾರ ನಡೆಸುವ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ಕಾದಿದೆ ಎಂಬ ಎಚ್ಚರಿಕೆ ನೀಡಿದೆ.

ದಕ್ಷಿಣ ಕೊರಿಯಾ ಇಂತಹ ಶಿಕ್ಷೆಯನ್ನು ಜಾರಿ ಮಾಡಿರುವ ಮೊದಲ ಏಷ್ಯಾ ದೇಶವಾಗಿದೆ. ಈ ರೀತಿಯ ಶಿಕ್ಷೆಯು ಈಗಾಗಲೇ ಡೆನ್ಮಾರ್ಕ್, ಜರ್ಮನಿ, ಸ್ವೀಡನ್ ಹಾಗೂ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಜಾರಿಯಲ್ಲಿದೆ.ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ರಾಸಾಯನಿಕದ ಮೂಲಕ ನಿರ್ವೀರ್ಯಗೊಳಿಸುವ ಶಿಕ್ಷೆಯನ್ನು ನೀಡುವ ಕಾನೂನು 2011 ಇಲ್ಲಿ ಜಾರಿಗೆ ತರಲಾಗಿತ್ತು.

ದಕ್ಷಿಣ ಕೊರಿಯಾ ನ್ಯಾಯಾಲಯದ ಈ ತೀರ್ಪು ಭಾರತ ಸೇರಿದಂತೆ ಈ ರೀತಿತ ಸಮಸ್ಯೆ ಎದುರಿಸುತ್ತಿರುವ ಎಲ್ಲಾ ದೇಶಗಳ ಗಮನ ಸೆಳೆದಿದೆ.

ವೆಬ್ದುನಿಯಾವನ್ನು ಓದಿ