ಅನೈತಿಕ ಸಂಬಂಧ: ಕಾಫಿ ಕಪ್‌ನಿಂದಲೇ ಪತಿಯನ್ನು ಹತೈಗೈದ ಮಹಾಪತ್ನಿ

ಸೋಮವಾರ, 31 ಮಾರ್ಚ್ 2014 (15:29 IST)
ಪತಿಯ ಅನೈತಿಕ ಸಂಬಂಧಗಳಿಂದ ಬೇಸತ್ತ ಪತ್ನಿಯೊಬ್ಬಳು ಪತಿಯನ್ನು ಕಾಫಿ ಕಪ್‌ನಿಂದ ಹಲ್ಲೆ ಮಾಡಿ ಹತ್ಯೆಗೈದ ಘಟನೆ ವರದಿಯಾಗಿದೆ.

61 ವರ್ಷ ವಯಸ್ಸಿನ ಪತ್ನಿ ಎಮಿಕೊ ಹಿರೋಸ್, ತನ್ನ 70 ವರ್ಷ ವಯಸ್ಸಿನ ಪತಿ ಯಾಸುವೊ ಹೀರೋಸ್ ಇತರ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಮಾಹಿತಿ ತಿಳಿದು ವ್ಯಗ್ರಳಾಗಿ ಕಾಫಿ ಮಗ್‌ನಿಂದ ಪತಿಯ ಮುಖ ಮತ್ತು ತಲೆಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದರಿಂದ ಪತಿ ಸ್ಥಳದಲ್ಲಿಯೇ ಗೊಟಕ್ ಎಂದಿದ್ದಾನೆ ಎಂದು ಜಪಾನ್‌ನ ಖ್ಯಾತ ಪತ್ರಿಕೆ ಆಸಾಹಿ ಶಿಂಬುನ್ ವರದಿ ಮಾಡಿದೆ.

ಯೊಕೊಹಾಮಾ ನ್ಯಾಷನಲ್ ಯುನಿವರ್ಸಿಟಿಯಲ್ಲಿ ಪ್ರೊಫೆಸರ್ ವೃತ್ತಿಯಲ್ಲಿದ್ದ ಯಾಸುವೊ ಹತ್ಯೆಗೆ ನಾನೇ ಕಾರಣಳಾಗಿದ್ದೇನೆ ಎಂದು ಪತ್ನಿ ಪೊಲೀಸರಿಗೆ ಶರಣಾಗಿದ್ದಾಳೆ.

ನಾನು ದ್ವೇಷಿಸುತ್ತಿದ್ದ ಮಹಿಳೆಯೊಂದಿಗೆ ಪತಿ ಅನೈತಿಕ ಸಂಬಂಧವಿರಿಸಿಕೊಂಡಿದ್ದರಿಂದ ನನಗೆ ಸಹಿಸಲು ಸಾಧ್ಯವಾಗಿಲ್ಲ. ಆದ್ದರಿಂದ, ನಾನು ಕೋಪದ ಭರದಲ್ಲಿ ಹುಚ್ಚಳಾಗಿ ಕಾಫಿ ಮಗ್‌ನಿಂದ 10ಕ್ಕೂ ಹೆಚ್ಚು ಬಾರಿ ಮುಖ ಮತ್ತು ತಲೆಯ ಮೇಲೆ ಹಲ್ಲೆ ಮಾಡಿರುವುದಾಗಿ ತಿಳಿಸಿದ್ದಾಳೆ.

ಪತಿಯನ್ನು ಹತ್ಯೆಗೈದ ಪತ್ನಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ