ಅಮೆರಿಕಾಗೆ ಹೆದರಿದ ಸಿರಿಯಾ ಅಣ್ವಸ್ತ್ರ ನೀಡಲು ಒಪ್ಪಿಗೆ.

ಬುಧವಾರ, 11 ಸೆಪ್ಟಂಬರ್ 2013 (15:51 IST)
PTI
PTI
ಅಮೇರಿಕಾದ ದಾಳಿಯ ಪರಿಣಾಮವನ್ನು ಊಹಿಸಿಕೊಳ್ಳಲೂ ಆಗದ ಸಿರಿಯಾ ಇದೀಗ ಯುದ್ಧ ಬೇಡ ಎಂಬ ನೀತಿಗೆ ಬದ್ಧವಾಗಿದೆ. ಈ ಹಿಂದೆ "ಯುದ್ಧಕ್ಕೆ ಸಿದ್ದವಿದ್ದೇವೆ. ನಮ್ಮ ಮೇಲೆ ಯುದ್ಧ ದಾಳಿ ಮಾಡಿದ್ರೆ ನಾವು ಸುಮ್ಮನೆ ಇರುವುದಿಲ್ಲ. ನಮ್ಮ ಕಡೆಯಿಂದ ಶತೃ ದೇಶಗಳ ಮೇಲೆ ಕ್ಷಿಪಣಿಗಳು ಹಾರುತ್ತವೆ" ಎಂದು ಅಬ್ಬರ ತೋರಿದ ಸಿರಿಯಾ ಅಧ್ಯಕ್ಷ ಇದೀಗ ತಮ್ಮಲ್ಲಿರುವ ಎಲ್ಲಾ ರಾಸಾಯನಿಕ ಅಸ್ತ್ರಗಳನ್ನು ಅಂತಾರಾಷ್ಟ್ರೀಯ ನಿಯಂತ್ರಣಕ್ಕೆ ಒಪ್ಪಿಕೊಂಡಿದ್ದಾರೆ.

ಇದನ್ನು ಪ್ರಸ್ತಾಪಿಸಿದ ಸಿರಿಯಾ ವಿದೇಶಾಂಗ ಸಚಿವ ವಲಿಡ್ ಅಲ್ ಮೊಲ್ಲೆಂಯವರು "ರಷ್ಯಾದ ಸಲಹೆಯಂತೆ ರಾಸಾಯನಿಕ ಅಸ್ತ್ರಗಳನ್ನು ಅಂತರ್‌ರಾಷ್ಟ್ರೀಯ ನಿಯಂತ್ರಣಕ್ಕೆ ಒಪ್ಪಿಸಲು ಸಿರಿಯಾ ಮುಂದಾಗಿದೆ ಎಂದು ಎಂದು ಘೋಷಿಸಿದರು.

ಸಿರಿಯಾದ ಈ ನಿರ್ಧಾರದಿಂದಾಗಿ ಸದ್ಯಕ್ಕೆ ಅಮೇರಕಾ ಅಧ್ಯಕ್ಷ ಬರಾಕ್ ಒಬಾಮಾ ಯುದ್ಧದಿಂದ ಹಿಂದೆ ಸರಿದಿದ್ದಾರೆ. ಆದ್ರೆ ಸಿರಿಯಾ ಏನಾದ್ರೂ ಡಬಲ್ ಗೇಮ್ ಆಡಿದ್ರೆ ಅಮೇರಿಕ ಮತ್ತೆ ಸಿಡಿದೇಳುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ..

ಸಿರಿಯಾದ ಈ ನಿರ್ಧಾರದಿಂದಾಗಿ ತಾತ್ಕಾಲಿಕ ನಿರಾಳತೆ ಸಿಕ್ಕಂತಗಿದ್ದು, ವಿಶ್ವದ ಎಲ್ಲಾ ಜನಗಳು ನಿಟ್ಟುಸಿರು ಬಿಡುವಂತಾಗಿದೆ.

ವೆಬ್ದುನಿಯಾವನ್ನು ಓದಿ