ಅಮೆರಿಕಾ ಒತ್ತಡ; ಇರಾನ್ ತೈಲ ಆಮದು ಕಡಿತಕ್ಕೆ ಚಿಂತನೆ

ಬುಧವಾರ, 22 ಫೆಬ್ರವರಿ 2012 (02:04 IST)
PTI
ಅಮೆರಿಕಾದಿಂದ ಒತ್ತಡ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇರಾನ್‌ನಿಂದ ತೈಲ ಆಮದು ಮಾಡುವ ಪ್ರಮಾಣವನ್ನು ಕಡಿತಗೊಳಿಸುವ ಕುರಿತಂತೆ ಭಾರತ, ಚೀನಾ ಹಾಗೂ ಜಪಾನ್ ರಾಷ್ಟ್ರಗಳು ಚಿಂತನೆ ಆರಂಭಿಸಿವೆ.

ಅಮೆರಿಕಾ ನಿರ್ಬಂಧಗಳು ಬಿಗಿಗೊಳಿಸುತ್ತಿರುವ ಹಿನ್ನಲೆಯಲ್ಲಿ ಇರಾನ್ ಕಚ್ಚಾತೈಲ ಆಮದು ಪ್ರಮಾಣವನ್ನು ಶೇಕಡಾ 10ರಷ್ಟು ಇಳಿಕೆ ಮಾಡುವ ಸಾಧ್ಯತೆಯಿದೆ. ಇದರಿಂದಾಗಿ ಏಷ್ಯಾದಲ್ಲಿನ ಪ್ರಬಲ ಕಚ್ಚಾತೈಲ ಮಾರುಕಟ್ಟೆಯನ್ನು ಇರಾನ್ ಕಳೆದುಕೊಳ್ಳಲಿದೆ.

ಟೆಹ್ರಾನ್ ವಿರುದ್ಧ ಒತ್ತಡದ ನೀತಿ ಅನುಸರಿಸಿರುವ ಯುರೋಪಿಯನ್ ಯೂನಿಯನ್ ಈಗಾಗಲೇ ಇರಾನ್ ತೈಲ ಆಮದನ್ನು ಜುಲೈ 1ರಿಂದ ಸಂಪೂರ್ಣವಾಗಿ ನಿಷೇಧಿಸುವಂತೆ ಸೂಚಿಸಿದೆ.

ವೆಬ್ದುನಿಯಾವನ್ನು ಓದಿ