ಅಮೆರಿಕ ವಿದ್ಯಾರ್ಥಿನಿಯರಿಗೆ ಭಾರತದಲ್ಲಿ ರೇಪ್‌ಗೆ ಗುರಿಯಾಗುವ ಭಯ

ಸೋಮವಾರ, 31 ಮಾರ್ಚ್ 2014 (18:59 IST)
ರಾಂಚಿ: ಅಮೆರಿಕದ ವಿದ್ಯಾರ್ಥಿನಿಯರು ಭಾರತಕ್ಕೆ ಅಧ್ಯಯನಕ್ಕಾಗಿ ಏಕೆ ಬರುವುದಿಲ್ಲ? ಭಾರತದಲ್ಲಿ ಕಾಮಪಿಪಾಸುಗಳಿಂದ ರೇಪ್‌ಗೆ ಗುರಿಯಾಗುವ ಭಯದಿಂದ ಅಮೆರಿಕದ ವಿದ್ಯಾರ್ಥಿನಿಯರು ಭಾರತಕ್ಕೆ ಬರುತ್ತಿಲ್ಲ. ಹೀಗೆಂದು ಹೇಳಿದವರು ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿರುವ ನ್ಯಾನ್ಸಿ ಪೋವೆಲ್. ಜಾರ್ಖಂಡ್‌ಗೆ ಚೊಚ್ಚಲ ಭೇಟಿ ನೀಡಿದ್ದಾಗ ಅಮೆರಿಕದ ವಿದ್ಯಾರ್ಥಿನಿಯರು ಭಾರತಕ್ಕೆ ಬರದಿರುವುದಕ್ಕೆ ಇದೊಂದು ಅಂಶವಾಗಿದೆ ಎಂದು ಹೇಳಿದರು.ವೈಯಕ್ತಿಕ ಭದ್ರತೆ ಕುರಿತ ಕಾಳಜಿ ಮತ್ತು ಭಾರತದಲ್ಲಿ ರೇಪ್ ಪ್ರಕರಣಗಳ ಫಲವಾಗಿ ಮಹಿಳೆಯರಿಗೆ ಹೆಚ್ಚಿದ ಅಪಾಯದಿಂದ ಭಾರತಕ್ಕೆ ಓದುವುದಕ್ಕೆ ಅಮೆರಿಕ ಮಹಿಳೆಯರು ಬರುತ್ತಿಲ್ಲ ಎಂದು ರಾಂಚಿಯಲ್ಲಿ ಕ್ಸೇವಿಯರ್ ಇನ್‌ಸ್ಟಿಟ್ಯೂಟ್ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು.

ಆ ಸಂದರ್ಭದಲ್ಲಿ ಕ್ಸೇವಿಯರ್ ಕಾಲೇಜು ವಿದ್ಯಾರ್ಥಿನಿಯರು ಕೂಡ ಅವರ ಮಾತಿಗೆ ಸಮ್ಮತಿಸಿ, ನಾವು ಕೂಡ ಬೀದಿಗಳಲ್ಲಿ ಲೈಂಗಿಕ ಕಿರುಕುಳ ಎದುರಿಸಿದ್ದೇವೆ ಎಂದು ತಿಳಿಸಿದರು.ಕಳೆದ ವರ್ಷ ಚಿಕಾಗೋ ವಿವಿಯ ವಿದ್ಯಾರ್ಥಿನಿಯೊಬ್ಬಳು ಭಾರತಕ್ಕೆ ಅಧ್ಯಯನ ಪ್ರವಾಸ ಕೈಗೊಂಡು, ಭಾರತ ಸೌಂದರ್ಯ ಮತ್ತು ಸಾಹಸಗಳಿಗೆ ಹೇಳಿಮಾಡಿಸಿದ ಸ್ಥಳವಾಗಿದೆ. ಆದರೆ ಸತತ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರವೂ ವ್ಯಾಪಕವಾಗಿದೆ ಎಂದು ಸಿಎನ್‌ಎನ್‌ಗೆ ವರದಿ ಮಾಡಿದ್ದಳು.

ವೆಬ್ದುನಿಯಾವನ್ನು ಓದಿ